ಲಾಯಿಲ : ಪ್ರಸನ್ನ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಲಾಯಿಲ, ಬೆಳ್ತಂಗಡಿ ಇಲ್ಲಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ, ಕೆ. ಗಂಗಾಧರ ಗೌಡ ವಹಿಸಿದ್ದು ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ನೀಡಿ ಹಿತವಚನಗಳನ್ನು ನೀಡಿದರು. ತಾಂತ್ರಿಕ ನೈಪುಣ್ಯತೆಯ ಜತೆಗೆ ಜೀವನದಲ್ಲಿ ಶಿಸ್ತು, ದೃಢತೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ನಿರ್ವಹಿಸಿದರೆ ಯಶಸನ್ನು ಪಡೆಯಲು ಸಾಧ್ಯ, ಬದುಕಿನಲ್ಲಿ ಒಳ್ಳೆಯ ಸ್ಥಾನವನ್ನು ಪಡೆದು ಹೆತ್ತವರ ಹಾಗೂ ಸಂಸ್ಥೆಯ ಹೆಸರನ್ನು ಶಾಶ್ವತವಾಗಿರಿಸುವತ್ತ ತಮ್ಮ ಮುಂದಿನ ಗುರಿಯಿರಲಿ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಮತ್ತು ಪ್ರಸನ್ನ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಪ್ರೋ. ಹೆಚ್. ಎಮ್. ಪಾಟೀಲ್ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಚಂದ್ರರಾವ್ ಮದನೆಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಉಪನ್ಯಾಸಕದಾರ ಪುನೀತ್, ಕು. ದೀಪ್ತಿ, ಬಂಗಾರಪ್ಪ, ವಿಜಯ ಸಿ.ಪಿ, ಶರತ್ ಕುಮಾರ್ ಮತ್ತು ಶ್ರುತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.