ಉಜಿರೆಯಲ್ಲಿ ಪತಂಜಲಿಯಿಂದ ಉಚಿತ ಯೋಗ ತರಬೇತಿ ಸಪ್ತಾಹ

Advt_NewsUnder_1
Advt_NewsUnder_1
Advt_NewsUnder_1

ujire yoga shibira pathanjali  ಉಜಿರೆ : ಪತಂಜಲಿ ಯೋಗ ಸಮಿತಿ, ಪತಂಜಲಿ ಚಿಕಿತ್ಸಾಲಯ ಉಜಿರೆ, ಜೇಸಿಐ ಮಂಜುಶ್ರೀ ಬೆಳ್ತಂಗಡಿ, ಶ್ರೀ ಶಾರದಾ ಸೇವಾ ಟ್ರಸ್ಟ್ ಉಜಿರೆ ಇವರ ಸಹಭಾಗಿತ್ವದಲ್ಲಿ ಹರಿದ್ವಾರದ ಅಂತಾರಾಷ್ಟ್ರೀಯ ಯೋಗಗುರು ಬಾಬಾ ರಾಮ್‌ದೇವ್ ಗುರೂಜಿಯವರ ಅನುಭವಿ ಯೋಗ ತಜ್ಞರಿಂದ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ 7 ದಿನಗಳ ಕಾಲ ಉಚಿತ ಯೋಗ ಮತ್ತು ಪ್ರಾಣಾಯಾಮ ಶಿಬಿರ ನಡೆಯಿತು. ಜೂ. 15 ರಂದು ಶಿಬಿರ ಉದ್ಘಾಟನೆ ನಡೆಯಿತು. ಜೂ. 21 ರಂದು ನಡೆದ ಸಮಾರೋಪದಲ್ಲಿ ಉಜಿರೆ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಜಾತ ಸರಳಾಯ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಸಾತ್ವಿಕ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಪತ್ರಕರ್ತ ಲಕ್ಷ್ಮೀ ಮಚ್ಚಿನ, ಜೇಸಿಐ ಮಂಜುಶ್ರಿ ಬೆಳ್ತಂಗಡಿ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಸೇರಿದಂತೆ ಪದಾಧಿಕಾರಿಗಳು, ಜೇಸಿಐ ವಲಯ ಕಾರ್ಯಕ್ರಮ ನಿರ್ದೇಶಕ ಚಿದಾನಂದ ಇಡ್ಯಾ, ಶ್ರೀ ಧ.ಮ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲ ಟಿ. ಕೃಷ್ಣಮೂರ್ತಿ ಅವರುಗಳು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಏಳು ದಿನಗಳ ಕಾಲ ನಡೆದ ಈ ಶಿಬಿರವನ್ನು ಯೋಗ ಗುರುಗಳಾದ ಹರೀಶ್ ಪೈ ನಡೆಸಿಕೊಟ್ಟರು. ಅವರೊಂದಿಗೆ ಜೇಸಿಐ ಮಂಜುಶ್ರಿ ಬೆಳ್ತಂಗಡಿಯ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ದಾ, ಉದಯ ಕುಮಾರ್ ಹಿದಿಂಗಳ, ದುರ್ಗಾಪ್ರಸಾದ್, ಸುರಕ್ಷಾ ಮೆಡಿಕಲ್ಸ್‌ನ ಶ್ರೀಧರ್ ಕೆ.ವಿ, ಶ್ರೀಮತಿ ಸವಿತಾ ಜಯದೇವ ಮತ್ತು ಶ್ರೀಮತಿ ಗಾಯತ್ರಿ ಶ್ರೀಧರ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.