ಬೆಳ್ತಂಗಡಿ ಮಂಜುಶ್ರೀ ಜೆಸಿಐಗೆ ಅತ್ಯುತ್ತಮ ಘಟಕ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

jci belthangady uttama gataka prasasti copy ಬೆಳ್ತಂಗಡಿ : ಕಾಪುವಿನಲ್ಲಿ ನಡೆದ ದ.ಕ, ಉಡುಪಿ, ಉತ್ತರಕನ್ನಡ ಜಿಲ್ಲೆಯನ್ನೊಳಗೊಂಡ ವಲಯ 15ರ ಜೆಸಿಐ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಅತ್ಯುತ್ತಮ ಘಟಕ ಪ್ರಶಸ್ತಿಯೊಂದಿಗೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.
ಘಟಕದಲ್ಲಿ ನಿರಂತರ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆ ಗಳನ್ನು ಗುರುತಿಸಿ ಈ ಸಂದರ್ಭ ಗೌರವಿಸಲಾಯಿತು. ಬೆಳ್ತಂಗಡಿ ಜೆಸಿಐ ವತಿಯಿಂದ ನಡೆದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯಂದು ಘಟಕವು ಸುಮಾರು 17 ಶಾಲೆಗಳ 9000 ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿರುವುದು ವಲಯದಲ್ಲೇ ಈ ತನಕದ ದಾಖಲೆಯಾಗಿ ಮೂಡಿಬಂತು. ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಶಾಲಾ ಮಕ್ಕಳಿಗೆ ತರಬೇತಿ ಶಿಬಿರ, ಯೋಗ ತರಬೇತಿ ಶಿಬಿರ, ಕ್ರೀಡಾಕೂಟದ ಆಯೋಜನೆ, ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಪುಟಾಣಿಗಳಿಗೆ ಬೇಸಿಗೆ ಶಿಬಿರದ ಆಯೋಜನೆ. ರಾಷ್ಟ್ರಾಧ್ಯಕ್ಷರ ಬೇಟಿ ಕಾರ್ಯಕ್ರಮ, ಸುರಕ್ಷಾ ಯಂತ್ರದ ಕೊಡುಗೆ, ಹುತಾತ್ಮರ ದಿನಾಚರಣೆ, ಮಹಿಳಾ ಸಬಳೀಕರಣದ ಕಾರ್ಯಕ್ರಮ ಆಯೋಜನೆ, ಸ್ವಚ್ಛತಾ ಆಂದೋಲನ ಕಾರ್ಯಕ್ರಮ, ಕುಟುಂಬೋತ್ಸವ ಆಯೋಜನೆ, ಪರಿಸರ ಸಪ್ತಾಹ ಆಯೋಜನೆ, ಇವೆಂಟ್ ಪ್ರೋಮೋಷನ್ಸ್, ವಲಯದ ಕಾರ್ಯಕ್ರಮಗಳಾದ ಅಧ್ಯಕ್ಷರ ತರಬೇತಿ, ಘಟಕಾಧಿಕಾರಿಗಳ ತರಭೇತಿ, ಕಡಲೋತ್ಸವ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ವಲಯದ ಕಾರ್ಯಕ್ರಮದ ಆಯೋಜನೆ ಇತ್ಯಾದಿ ವಿಭಾಗಗಳಲ್ಲಿ ವಿಶಿಷ್ಟ ಗೌರವಕ್ಕೆ ಪಾತ್ರವಾಯಿತು. ವಲಯಾಧ್ಯಕ್ಷರಾದ ಸಂದೀಪ್ ಕುಮಾರ್, ವಲಯ ನಿಕಟಪೂರ್ವಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್, ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ರೈ, ವಲಯ ಕಾರ್ಯಕ್ರಮ ನಿರ್ದೇಶಕರಾದ ಚಿದಾನಂದ ಇಡ್ಯಾ, ಹಾಗೂ ವಲಯಾಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕಾರ ಸಂಭ್ರಮದಲ್ಲಿ ಘಟಕಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಪೂರ್ವಾಧ್ಯಕ್ಷರಾದ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್ ಲಾಯಿಲ, ಉಪಾಧ್ಯಕ್ಷರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಕಿರಣ್ ಕುಮಾರ್ ಶೆಟ್ಟಿ, ಅಭಿನಂದನ್ ಹರೀಶ್, ಗಣೇಶ್ ಶಿರ್ಲಾಲು, ಜೆಜೆಸಿ ಸಂಯೋಜಕ ಜಿತೇಶ್, ಜೆಸಿಗಳಾದ ಚಿದಾನಂದ, ಸತೀಶ್ ಸುವರ್ಣ, ಪ್ರೀತಂ ಶೆಟ್ಟಿ, ಸಂತೋಷ್ ಶೆಟ್ಟಿ, ಅನೂಷ್‌ಚಂದ್ರ, ಪ್ರಸಾದ್ ಕಕ್ಕಿಂಜೆ, ಟುವಿತ್, ಯತೀಶ್ ಕೆ.ಎಸ್., ಹೇಮಾವತಿ, ಸ್ವಾತಿ ಜೆಜೆಸಿ ಅಧ್ಯಕ್ಷ ಸ್ಮಿತೇಶ್ ಬಾರ್ಯ, ಜೆಜೆಸಿ ಕಾರ್ಯದರ್ಶಿ ವಿನೋದ್‌ರಾಜ್ ಆಳ್ವ, ಚಂದ್ರಹಾಸ ಬಳಂಜ, ಹಿತೇಶ್ ಕಾಪಿನಡ್ಕ, ಜೆಜೆಸಿ ನಿಕಟಪೂರ್ವಾಧ್ಯಕ್ಷ ದೇವಿಪ್ರಸಾದ್ ಭಟ್ ಉಪಸ್ಥಿತರಿದ್ದರು.
ವಲಯ 15 ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ಮೀಡಿಯ ಕವರೇಜ್‌ನಲ್ಲಿ ಬೆಳ್ತಂಗಡಿ ಮಂಜುಶ್ರೀ ಘಟಕವು ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು. ಮಹಿಳಾ ಸಬಲೀಕರಣ (ಇಪಿಎಸ್) ಭಾಷಣ ಸ್ಪರ್ಧೆಯಲ್ಲಿ ಜೆಸಿರೆಟ್ ವಿಭಾಗದಲ್ಲಿ ಘಟಕದ ಜೆಸಿ ಹೇಮಾವತಿಯವರು ಪ್ರಥಮ ಸ್ಥಾನಿಯಾದರು. ಮಾತ್ರವಲ್ಲದೆ ಜೆಜೆಸಿ ಎಪಿಎಸ್ ಡ್ರೀಮ್ ಟುವರ್ಡ್ಸ್ ಡೆಸ್ಟಿನೇಶನ್ ಭಾಷಣ ಸ್ಪರ್ಧೆಯಲ್ಲಿ ಘಟಕದ ಜೆಜೆಸಿ ಸ್ಮಿತೇಶ್ ಬಾರ್ಯ ಪ್ರಥಮ ಸ್ಥಾನ ಪಡೆದರೆ ಜೆಜೆಸಿ ಚಂದ್ರಹಾಸ ಬಳಂಜ ದ್ವಿತೀಯ ಸ್ಥಾನಿಯಾಗಿ ಮೂಡಿಬಂದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.