ಗ್ರಾಮೀಣ ಅಧ್ಯಯನದ ಹಿನ್ನೆಲೆ ಹೊಸಂಗಡಿ ಗ್ರಾ.ಪಂ.ಗೆ ನಬಾರ್ಡ್ ಅಧಿಕಾರಿಗಳ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

hosangadi gp ge nabard adikarigala beti copy

ಹೊಸಂಗಡಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ನಬಾರ್ಡ್) ಬ್ಯಾಂಕ್‌ನ ಮುಂಬೈ ಹಾಗೂ ಜೈಪುರ ಶಾಖೆಯ ಅಧಿಕಾರಿಗಳು ಗ್ರಾಮೀಣ ಅಧ್ಯಯನದ ಹಿನ್ನೆಲೆಯಲ್ಲಿ ಹೊಸಂಗಡಿ ಗ್ರಾಮ ಪಂಚಾಯತುಗೆ ಭೇಟಿ ನೀಡಿದರು.
ನನ್ನ ಮನೆ-ಸೌರ ಮನೆ, ನನ್ನ ಮನೆ-ನನ್ನ ರಸ್ತೆ ಹೀಗೆ ಗ್ರಾಮದ ವಿನೂತನ ಯೋಜನೆಗಳ ಅನುಷ್ಠಾನದ ಬಗೆಗಿನ ಮಾಹಿತಿ ಪಡೆದುಕೊಂಡರು.
೨೦೦೫-೦೬ರಲ್ಲಿ ಪಡೆದ ನಿರ್ಮಲ ಗ್ರಾಮ ಪುರಸ್ಕಾರ, ೨೦೦೯-೧೦ರಲ್ಲಿ ರಾಜ್ಯ ನೈರ್ಮಲ್ಯ ರತ್ನ ಪ್ರಶಸ್ತಿ, ೨೦೧೦-೧೧ರಲ್ಲಿ ವಿಭಾಗ ಮಟ್ಟದ ಸ್ವರ್ಣ ನೈರ್ಮಲ್ಯ ಪ್ರಶಸ್ತಿ, ರಜತ ನೈರ್ಮಲ್ಯ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ ಪಂಚಾಯತನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಅಧ್ಯಯನ ನಡೆಸುತ್ತಿದ್ದಾರೆ.
ನಬಾರ್ಡ್‌ನ ಅಧಿಕಾರಿಗಳಾದ ಶ್ರೀಪಾದ್, ದೀಪಾಶ್ರೀ, ಪ್ರಿಯಾಂಕ, ರುಬಿನ್, ಕೃತಿಕಾ, ಶಕ್ತಿ ಭೇಟಿಯ ನಿಯೋಗದಲ್ಲಿದ್ದರು. ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್ ಹಾಗೂ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಅಧಿಕಾರಿಗಳನ್ನು ಸ್ವಾಗತಿಸಿದರು. ಪಂಚಾಯತು ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಿ. ಹಾಗೂ ಸದಸ್ಯ ಅಕ್ಬರ್ ಆಲಿ ಜೊತೆಗಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.