“ಮಲ್‌ಜಅ” ವುಮೆನ್ಸ್ ಮತ್ತು ಶರೀಅತ್ ಕಾಲೇಜು ಉದ್ಘಾಟನೆ

141

151

161

ಕಾಶಿಬೆಟ್ಟು: “ಮಲ್‌ಜಅ” ಕ್ಯಾಂಪಸ್‌ನಲ್ಲಿ ಪದವಿ ಪೂರ್ವ ಶಿಕ್ಷಣಕ್ಕಾಗಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮತ್ತು ಶರೀಅತ್ ವುಮೆನ್ಸ್ ಕಾಲೇಜು ಇದರ ಉದ್ಘಾಟನೆಯು ಜೂ.16 ರಂದು ನಡೆಯಿತು.
ಮಲ್‌ಹರ್ ಶರೀಅತ್ ಕಾಲೇಜು ಪ್ರಾಂಶುಪಾಲ ಅಬ್ದುಸ್ಸಲಾಂ ಮಿಸ್ಬಾಹಿ ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಉದ್ಘಾಟನೆಯನ್ನು ಮಲ್‌ಜಅ ಚೇರ್‌ಮೆನ್ ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಮದನಿ ನಿರ್ವಹಿಸಿದರು.
ಮುಖ್ಯ ಅತಿಥಿಯಾಗಿದ್ದ ಸುನ್ನೀ ಜಂ ಇಯ್ಯತುಲ್ ಉಲಮಾ ಇದರ ಅಧ್ಯಕ್ಷ ಕಾಸಿಂ ಮದನಿ ಕರಾಯ, ಸುದ್ದಿ ಬಿಡುಗಡೆ ವರದಿಗಾರ ಅಶ್ರಫ್ ಆಲಿಕುಂಞಿ ಶುಭ ಕೋರಿದರು. ಮಲ್‌ಹರ್ ಮಹಿಳಾ ಕಾಲೇಜಿನ ಆಡಳಿತಾಧಿಕಾರಿ ಮೊದು ಮಾಸ್ಟರ್ ಸಂಪನ್ಮೂಲ ಉಪನ್ಯಾಸ ನೀಡಿದರು. ಮಲ್‌ಜಅ ಜನರಲ್ ಮೆನೆಜರ್ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಹಮೀದ್ ಮುಸ್ಲಿಯಾರ್, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕವೃಂದ, ಬೋಧಕೇತರ ಸಿಬಂದಿಗಳು ಸಹಕಾರ ನೀಡಿದರು.
ಕಾಲೇಜು ಪ್ರಾರಂಭಿಕ ವರ್ಷದಲ್ಲೇ ಸಂಸ್ಥೆಯಲ್ಲಿ ಪಿಯುಸಿ ಮತ್ತು ಶರೀಅತ್‌ಗೆ ಒಟ್ಟು 190 ವಿದ್ಯಾರ್ಥಿಗಳು ನೊಂದಾವಣೆಗೊಂಡು ಹೊಸ ದಾಖಲೆ ಬರೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.