ಕೂಟ ಮಹಾಜಗತ್ತು ಬೆಳ್ತಂಗಡಿ ತಾ| ವಾರ್ಷಿಕ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1

KUTA MAHA JAGATTUಉಜಿರೆ : ಕೂಟ ಮಹಾಜಗತ್ತು ಸಾಲಿಗ್ರಾಮ ಬೆಳ್ತಂಗಡಿ ತಾಲೂಕು ಅಂಗ ಸಂಸ್ಥೆಯ 18 ನೇ ವಾರ್ಷಿಕ ಮಹಾಸಭೆಯು ಜೂ.5ರಂದು ಅಂಗಸಂಸ್ಥೆಯ ಅಧ್ಯಕ್ಷ ವಿಷ್ಣುಮೂರ್ತಿ ಹೊಳ್ಳ ನಾಡ್ಜೆಯವರ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀರಾಮಕೃಷ್ಣ ಸಭಾ ಮಂಟಪದಲ್ಲಿ ಜರುಗಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಬಂಟ್ವಾಳ ತಾಲೂಕು ಕೂಟ ಮಹಾಜಗತ್ತು ಅಧ್ಯಕ್ಷ ನಾರಾಯಣ ಸೋಮಯಾಜಿ, ಸುಳ್ಯ ತಾಲೂಕು ಕೂಟ ಮಹಾಜಗತ್ತು ಅಧ್ಯಕ್ಷ ಶಂಕರ ಮಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗಾಗಿ ಪಿ.ಎಚ್.ಡಿ. ಪಡೆದ ವಿದ್ಯಾ ಸೋಮಯಾಜಿ ಹಾಗೂ ಸಮಾಜ ಸೇವಕ ಸುರೇಶ ರಾವ್ ಹಾಗೂ 80 ವರ್ಷ ಪೂರೈಸಿದ ಹಿರಿಯ ಕೂಟ ಬಂಧುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿಶೇಷ ಸಾಧಕರನ್ನು ಪುರಸ್ಕರಿಸಲಾಯಿತು.
ಕಾರ್ಯದರ್ಶಿ ರಮೇಶ ಮಯ್ಯ 2015-16 ನೇ ಸಾಲಿನ ವಾರ್ಷಿಕ ವರದಿ, ವಾಸುದೇವ ಸೋಮಯಾಜಿ ಲೆಕ್ಕಪತ್ರ ಹಾಗೂ 2016-17 ನೇ ಸಾಲಿನ ಮುಂಗಡ ಪತ್ರ, ಅನುರಾಧಾ ಕಾರಂತ ಮಹಿಳಾ ವೇದಿಕೆ ವರದಿ, ಅರವಿಂದ ಕಾರಂತ ಬಿಲಿಯನ್ ಪೌಂಡೇಶನ್ ಟ್ರಸ್ಟ್ ವರದಿ ಮಂಡಿಸಿದರು. ಆಶಾ ಎಸ್. ಅಡೂರು ಪ್ರತಿಭಾ ಪುರಸ್ಕಾರ, ರಮೇಶ ಮಯ್ಯ ವಿಶೇಷ ಸಾಧಕರ ಹಾಗೂ ವಾಸುದೇವ ಸೋಮಯಾಜಿ ೮೦ ವರ್ಷ ಪೂರೈಸಿದ ಕೂಟ ಬಂಧುಗಳ ವಿವರ ನೀಡಿದರು. ಕೂಟ ಬಂಧು ಕುಟುಂಬ ಸದಸ್ಯರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರ ಆಯ್ಕೆ ನಡೆದು ಅಧ್ಯಕ್ಷರು ಮತ್ತು ಮಹಿಳಾ ವೇದಿಕೆ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷ ವಿಷ್ಣುಮೂರ್ತಿ ಹೊಳ್ಳ ನಾಡ್ಜೆ ಸ್ವಾಗತಿಸಿ, ವಿಷ್ಣುಪ್ರಕಾಶ್ ಮತ್ತು ಶಂಕರ ಹೇರ್ಳೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಮೇಶ ಮಯ್ಯ ವಂದಿಸಿದರು. ಗಣಪತಿ ಹವನ, ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮ ಪಠಣ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.