ಅಕ್ರಮ ಮರಳುಸಾಗಾಟ ತಡೆಗೆ ವಿಶೇಷ ಟಾಸ್ಕ್‌ಪೋರ್ಸ್ ರಚನೆ ತಾಲೂಕಿನ ತಂಡದಿಂದ ಜೂ. ೧೫ರಂದು ಕಾರ್ಯಾಚರಣೆ ಆರಂಭ

Advt_NewsUnder_1
Advt_NewsUnder_1
Advt_NewsUnder_1

 

maralu taskpors (1) copy

maralu taskpors copy

ಬೆಳ್ತಂಗಡಿ :  ಮರಳು ಸಾಗಾಟದ ಲಾರಿಗಳ ಆರ್ಭಟಕ್ಕೆ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸಣ್ಣ ಮತ್ತು ಭಾರೀ ಅಪಘಾತಗಳು, ಪ್ರಾಣ ಹಾನಿಗಳು ನಡೆಯುತ್ತಿರುವ ಬೆನ್ನಿಗೇ ಪರವಾನಿಗೆಗಿಂತ ಅಧಿಕ ಪ್ರಮಾಣದಲ್ಲಿ ಮರಳು ಸಾಗಾಟ ಮಾಡುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ವಿಶೇಷ ಟಾಸ್ಕ್‌ಪೋರ್ಸ್ ಒಂದನ್ನು ರಚಿಸಲಾಗಿದೆ.
ಆ ತಂಡ ಜೂ. 15 ರಂದು ಬೆಳ್ತಂಗಡಿ ಹಳೆಕೋಟೆ ಬಳಿ ಕಾರ್ಯಾಚರಣೆ ನಡೆಸಿ ಹಲವು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ದಂಡ ವಸೂಲಾಗುವಂತೆ ಕ್ರಮ ಕೈಗೊಂಡಿದೆ.
ಬೆಳ್ತಂಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ಇಂಜಿನಿಯರ್ ಮಹಾದೇವಪ್ಪ, ಲೋಕೋಪಯೋಗಿ ಇಲಾಖಾ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಕಂದಾಯ ನಿರೀಕ್ಷಕ ರವಿ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಪಂಚಾಯತ್ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಹಾಗೂ ಇಲಾಖಾ ಸಿಬ್ಬಂದಿಗಳು ಸಹಕಾರ ನೀಡುವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.