ಉಜಿರೆ : ಪತಂಜಲಿ ಚಿಕಿತ್ಸಾಲಯ ಉಜಿರೆ ಇವರ ವತಿಯಿಂದ ಜೆಸಿಐ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲ್ಲಿನ ಶಾರದಾ ಮಂಟಪದಲ್ಲಿ ಜೂ 15ರಿಂದ 21ರ ವರೆಗೆ ಉಚಿತ ಯೋಗ ಮತ್ತು ಪ್ರಾಣಾಯಾಮ ತರಭೇತಿ ಶಿಬಿರ ನಡೆಯುತ್ತಿದೆ.
ಸಂಜೆ 5.30 ರಿಂದ ರಾತ್ರಿ 7.00 ರ ವರೆಗೆ ನಡೆಯುವ ಈ ಶಿಬಿರದ ಪ್ರಯೋಜನವನ್ನು ಜನತೆ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ. ಶಿಬಿರಾರ್ಥಿಗಳು ನಿರಾಹಾರಿಗಳಾಗಿ 6*2 ಅಳತೆಯ ಬೆಡ್ಶೀಟ್ನೊಂದಿಗೆ ಸಮಯಕ್ಕೆ ಸರಿಯಾಗಿ ಸಭಾಭವನದಲ್ಲಿ ಉಪಸ್ಥಿತರಿರುವಂತೆ ತಿಳಿಸಿದ್ದಾರೆ.