ಹುಡುಕಿಕೊಟ್ಟು ಬಹುಮಾನ ಗೆಲ್ಲಿ

ನಕಲಿ ರೇಶನ್ ಕಾರ್ಡ್ ಮಾಡಿಸಿಕೊಂಡು ಸರ್ಕಾರಕ್ಕೆ, ಸಮಾಜಕ್ಕೆ ಮೋಸ ಮಾಡುತ್ತಿರುವವರ ಮಾಹಿತಿ ನೀಡಿದರೆ ೪೦೦ ರು. ಬಹುಮಾನ ಪಡೆದುಕೊಳ್ಳಬಹುದು. ಅನರ್ಹ ಪಡಿತರ ಚೀಟಿಗಳನ್ನು ಕಂಡುಹಿಡಿಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಅಕ್ರಮಗಳು ನುಸುಳುತ್ತಿವೆ. ಹಾಗಾಗಿ ಬಹುಮಾನ ನೀಡುವ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ದೂರುಗಳನ್ನು ಇಲಾಖೆಯ ವೆಬ್‌ಸೈಟ್ ಮೂಲಕವೇ ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಪಡಿತರ ಹಂಚಿಕೆಗೆ ನೆರವಾಗುವಂತೆ ನ್ಯಾಯಬೆಲೆ ಅಂಗಡಿಗಳನ್ನು ನೋಡಿಕೊಳ್ಳಲು ಮೂರು ಸದಸ್ಯರ ಸಮಿತಿಯೊಂದನ್ನು ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.