ಶಾಸಕರ ಭಾರೀ ಲಾಭಿ

ರಾಜ್ಯ ಸಚಿವ ಸಂಪುಟ ಪುನಾರ್ರಚನೆಗಾಗಿ ಹಲವು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದು, ಮಂತ್ರಿಗಿರಿಗಾಗಿ ಭಾರೀ ಲಾಭಿ ನಡೆಸುತ್ತಿದ್ದಾರೆ. ಸಚಿವ ಹೆಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಕೃಷ್ಣ ಭೈರೇಗೌಡ, ರೋಷನ್ ಬೇಗ್ ಹಾಗೂ ಸಚಿವ ಸಂಪುಟದ ಹಲವು ಆಕಾಂಕ್ಷಿಗಳಾದ ಅಶೋಕ್ ಪಟ್ಟಣ್, ಹೆಚ್.ಎಂ. ರೇವಣ್ಣ, ರಿಜ್ವಾನ್ ಹರ್ಷದ್ ಸೇರಿದಂತೆ ಹಲವರು ದೆಹಲಿಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಸಂಪುಟ ಪುನಾರ್ರಚನೆಯಲ್ಲಿ ಸ್ಥಾನ ಪಡೆಯಲು ಹೈಕಮಾಂಡ್ ಬಳಿ ತೀವ್ರ ಲಾಭಿ ನಡೆಸುತ್ತಿದ್ದಾರೆ.  ಆದರೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಎಸ್.ಆರ್. ಪಾಟೀಲ್ ನಾವು ಲಾಭಿ ಮಾಡಲು ದೆಹಲಿಗೆ ಬಂದಿಲ್ಲ ಎಂದಿದ್ದಾರೆ, ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಮಾಡುವುದಿಲ್ಲ, ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದೇ ಆದಲ್ಲಿ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.