ಜೂ. 19:  ಸೇವಾಭಾರತಿ ಕನ್ಯಾಡಿಯಿಂದ ಉಜಿರೆಯಲ್ಲಿ ವಿಕಲಾಂಗರಿಗೆ ವಿಮಾಪಾಲಿಸಿ ನೊಂದಾವಣೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

seva bharathi

ಕನ್ಯಾಡಿ:  ಮಾನಸಿಕ ಹಾಗೂ ದೈಹಿಕ ವಿಶೇಷಚೇತನರು ಆರೋಗ್ಯ ವಿಮೆ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂಬ ಉದ್ಧೇಶದಿಂದ ಸೇವಾ ಭಾರತಿ ಕನ್ಯಾಡಿ ಇದರ ವತಿಯಿಂದ ಕೇಂದ್ರ ಸರಕಾರ ಪ್ರಾಯೋಜಿತ “ಸ್ವಾವಲಂಬನ ಆರೋಗ್ಯ ವಿಮಾ ಯೋಜನೆ” ಇದಕ್ಕೆ ನೊಂದಾವಣಾ ಕಾರ್ಯಕ್ರಮ ಜೂ. 19 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ವಿನಾಯಕ ರಾವ್ ತಿಳಿಸಿದರು.
ಕನ್ಯಾಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ವಿವರ ನೀಡಿದರು. 18 ರಿಂದ 65 ವರ್ಷದೊಳಗಿನ ವಯೋಮಾನದ ವಿಕಲಾಂಗರು ವಾರ್ಷಿಕ ರೂ. 355 ಪಾವತಿಸಿ ಮೊತ್ತವಾಗಿದೆ. ಈ ಪೈಕಿ ಫಲಾನುಭವಿಯು ಕೇವಲ 100 ರೂ. ಮಾತ್ರ ಪಾವತಿಸಿದಲ್ಲಿ ಉಳಿದ 255 ರೂ. ಗಳನ್ನು ಸೇವಾ ಭಾರತಿ ವತಿಯಿಂದ ದಾನಿಗಳ ನೆರವಿನೊಂದಿಗೆ ಪಾವತಿಸಲಿದೆ. ಅದಕ್ಕಾಗಿ 1000 ಫಲಾನುಭವಿಗಳ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು 2.55 ಲಕ್ಷ ರೂ. ಹಾಗೂ ಕಾರ್ಯಕ್ರಮಕ್ಕಾಗಿ 3.05 ಲಕ್ಷ ರೂ. ಅಂದಾಜುಪಟ್ಟಿ ತಯಾರಿಸಿದೆ. ಅಂಗವೈಕಲ್ಯತೆ ಕಾಣುವ 2 ಫೋಟೊ, ಫಲಾನುಭವಿಯ ಎರಡು ಪ್ರತಿ ಪಾಸ್‌ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ ಪ್ರತಿ, ಅಂಗವಿಕಲತೆ ಗುರುತಿನ ಚೀಟಿಯ ಪ್ರತಿಗಳನ್ನು ಹಾಜರುಪಡಿಸಿದಲ್ಲಿ ನೊಂದಾವಣೆ ನಡೆಯಲಿದೆ. ಇದಕ್ಕಾಗಿ ದಾನಿಗಳಿಂದ 10,20 ಹೀಗೆ ಪಾಲಿಸಿ ವೆಚ್ಚಭರಿಸುವಂತೆ ಕೇಳಿಕೊಳ್ಳಲಾಗುತ್ತಿದೆ. ಈ ವಿಮೆಯಿಂದ ಫಲಾನುಭವಿಗೆ 2 ಲಕ್ಷ ರೂ. ವರೆಗೆ ಆರೋಗ್ಯವಿಮೆ ದೊರೆಯಲಿದೆ. ಅವರು ಯಜಮಾನರಾಗಿದ್ದರೆ ಪತ್ನಿ ಮತ್ತು 2 ಮಕ್ಕಳಿಗೆ ಸೌಲಭ್ಯ ದೊರೆಯಲಿದೆ. ಆದ್ದರಿಂದ ಅಂತವರು ಅವರದೂ ಎರಡೆರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ, ತಾಲೂಕು ಅಂಗವಿಕಲರ ಸಂಘ ಮತ್ತು ರೋಟರಿ ಕ್ಲಬ್ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದೆ ಎಂದು ಅವರು ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ, ನಿವೃತ ಮೇಜರ್ ಜನರಲ್ ಎಂ. ವಿ ಭಟ್, ಅಂಗವಿಕಲರ ಸಂಘದ ಅಧ್ಯಕ್ಷೆ ಅಂಜನಾ ದೇವಿ ಉಜಿರೆ, ಎಂಡೋ ಪೀಡಿತರ ಪರ ಹೋರಾಟ ಸಮಿತಿಯ ಪುರಂದರ ಕಡಿರ, ಸೇವಾ ಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.