HomePage_Banner_
HomePage_Banner_

ಗುರುವಾಯನಕೆರೆಯಲ್ಲಿ ಅಪಾಯದ ಮುನ್ಸೂಚನೆ

guruvayanakere rakshana tade samasye copyಗುರುವಾಯನಕೆರೆ : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದರೂ ಸಂಬಂಧಿಸಿದ ಇಲಾಖೆಯವರು ಮುಂಜಾಗೃತಾ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದಕ್ಕೆ ಸಾಕ್ಷಿಯಂತಿದೆ ಗುರುವಾಯನಕೆರೆಯ ಕೆರೆಯ ಸಮೀಪದ ಅಪಾಯಕಾರಿ ತಿರುವಿನ ಬಳಿಯ ತಗ್ಗು ಪ್ರದೇಶ. ತಿಂಗಳ ಹಿಂದೆ ಕೆರೆಯ ಬಳಿ ಗದ್ದೆಗೆ ಹೋಗುವ ದಾರಿಯಲ್ಲಿರುವ ಲೋಹದ ರಕ್ಷಣಾ ತಡೆ ಪಟ್ಟಿಗೆ ರಾತ್ರಿ ವಾಹನವೊಂದು ಡಿಕ್ಕಿ ಹೊಡೆದರ ಪರಿಣಾಮ ಅದು ಕಳಚಿ ಬಿದ್ದಿದೆ. ಹೀಗಾಗಿ ಅಪಘಾತಕ್ಕೆ ಆಹ್ವಾನ ನೀಡಿದಂತಿದೆ.
ಕಾರ್ಕಳ ಹಾಗೂ ಮೂಡಬಿದ್ರೆ ಮಾರ್ಗದಿಂದ ಗುರುವಾಯನಕೆರೆಗೆ ಸಂಚರಿಸುವಾಗ ಚಾಲಕರು ತಿರುವಿನ ಬಳಿ ಜಾಗೃತೆಯಿಂದ ವಾಹನಗಳನ್ನು ಚಲಾಯಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ರಾತ್ರಿಯ ವೇಳೆ ಸಂಚರಿ ಸುವ ವಾಹನಗಳಿಗೆ ಅಪಾಯಕಾರಿ ಸ್ಥಿತಿ ಸೃಷ್ಠಿಯಾಗಿದೆ. ಕಾರಣ ತಿರುವಿನ ಬಳಿವಿರುವ ದಾರಿದೀಪ ಕಳೆದ ಇಪ್ಪತ್ತು ದಿನಗಳಿಂದ ಉರಿಯುತ್ತಿಲ್ಲ. ಸದಾ ಕಗ್ಗತ್ತಲುವಿರುವುದರಿಂದ ಪರವೂರಿನ ವಾಹನ ಚಾಲಕರಿಗೆ ಅಪಾಯದ ಬಗ್ಗೆ ತಿಳಿದಿರುವುದಿಲ್ಲ.
ಈ ಹಿಂದೆ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಸ್ಥಳೀಯರು ಹಗಲು, ರಾತ್ರಿಯನ್ನದೇ ಗಾಯಾಳುಗಳಿಗೆ ಮಾನವೀಯತೆಯ ನೆಲೆಯಿಂದ ಸಹಕರಿಸಿದ್ದಾರೆ. ಈ ದಾರಿಯಲ್ಲಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನ ಸದಸ್ಯರು , ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿತ್ಯ ಸಂಚರಿಸಿದರೂ ಸಮಸ್ಯೆಯನ್ನು ಗಮನಿಸಿಲ್ಲ. ಅವಸರವೇ ಅಪಘಾತಕ್ಕೆ ಮೂಲವೆಂದು ಹೇಳಲಾದರೂ, ಕಾಣದ ನಾನಾ ಕಾರಣಗಳಿರುತ್ತವೆ. ಈ ಪ್ರದೇಶದಲ್ಲಿ ಅಪಘಾತಗಳು ಸಂಭವಿಸುವ ಮೊದಲು ಸಂಬಂಧಿಸಿದ ಇಲಾಖೆಗಳು ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ತಕ್ಷಣ ಪರಿಹರಿಸುವತ್ತ ಚಿಂತಿಸಲಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.