ಪರುಷಗಡ್ಡೆ ಜೈನ್ ಮಿಲನ್‌ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

321 ಪುರುಷಗಡ್ಡೆ ಜೈನ್ ಮಿಲನ್‌ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂನ್ 5 ರಂದು ಪರುಷಗುಡ್ಡೆಯ ಪರುಷ ಪದ್ಮಾಂಬದಲ್ಲಿ ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೇಶಿರಾಜ್ ಅಜ್ರಿ ಅಂಡಿಂಜೆ ಇವರು ವಹಿಸಿಕೊಂಡಿದ್ದರು.
ಅಧ್ಯಕ್ಷರಾಗಿ ವಜ್ರಕುಮಾರ ಅಜ್ರಿ ಶಾಂತಿ ಕುಠೀರ ಕುತ್ಲೂರು ಮತ್ತು ಉಪಾಧ್ಯಕ್ಷರಾಗಿ ನಮಿರಾಜ್ ಬಿ.ಕೆ ಜೈನ್ ಕುಠೀರ ಕುತ್ಲೂರು ಹಾಗೂ ಕಾರ್ಯದರ್ಶಿಯಾಗಿ ಸನತ್ ಕುಮಾರ್ ಮಹಾವೀರ ನಿಲಯ ಈದು ವಹಿಸಿದ್ದರು. ಸಹ ಕಾರ್ಯದರ್ಶಿಯಾಗಿ ಕರುಣಾಕರ್ ಜೈನ್, ಚೇತನ ಶ್ರೀ ಕುತ್ಲೂರು ಮತ್ತು ಖಜಾಂಚಿಯಾಗಿ ಧನಕೀರ್ತಿ ಜೈನ್, ಪದ್ಮಗಂಧ ಕೊಕ್ರಾಡಿ ಇವರು ಪ್ರಮಾಣ ವಚನವನ್ನು ಸ್ವೀಕರಿಸಿದರು. ವಲಯ 8 ರ ನಿರ್ದೇಶಕರಾದ ಸೋಮಶೇಖರ ಶೆಟ್ಟಿಯವರು ಜೈನ್ ಮಿಲನ್‌ನ ಸಂಘಟನೆಯ ಬಗ್ಗೆ ತಿಳಿಯಪಡಿಸಿದರು. ಮುಖ್ಯ ಅತಿಥಿಯಾಗಿ ಸರಕಾರಿ ಪ್ರೌಢಶಾಲೆ ಸರಪಾಡಿ ಇದರ ಮುಖ್ಯ ಶಿಕ್ಷಕ ಉದಯ ಕುಮಾರ್ ಮದ್ದ ಧರ್ಮದ ಬಗ್ಗೆ ಮಾತನಾಡಿದರು. ವಲಯ 8 ರ ನಿರ್ದೇಶಕ ಸೋಮಶೇಖರ ಶೆಟ್ಟಿಯವರು ಪ್ರಮಾಣವಚನ ನೀಡಿದರು.
ವನಿತಾ ವೈ ಜೈನ್ ದುಗ್ಗಬೆಟ್ಟು ಗುತ್ತು ಅಂಡಿಂಜೆ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಶೋಕ್ ಕುಮಾರ್ ಕೊಕ್ರಾಡಿ ವಾರ್ಷಿಕ ವರದಿ ವಾಚಿಸಿ, ಲೆಕ್ಕಾಚಾರ ಮಂಡನೆಯನ್ನು ಹಾಗೂ ನಿರೂಪಣೆಯನ್ನು ಮತ್ತು ಧನ್ಯವಾದ ಸಮರ್ಪಣೆಯನ್ನು ಪ್ರಭಾಕರ ಬುಣ್ಣು ಕಾಡಬೆಟ್ಟು ಗುತ್ತು ಕುತ್ಲೂರು ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.