ದಸ್ತಾವೇಜು ಬರಹಗಾರ ಲಕ್ಷ್ಮೀನಾರಾಯಣ್ ಶೆಣೈ ಮತ್ತು ನ್ಯಾಯವಾದಿ ಶೈಲೇಶ್ ಠೋಸರ್‌ರ ನೂತನ ಕಚೇರಿ ಪ್ರಾರಂಭ

vakeelara kacheri udghatane (1) copyಬೆಳ್ತಂಗಡಿ : ಇಲ್ಲಿನ ಮಿನಿ ವಿಧಾನ ಸೌಧ ಕಟ್ಟಡದ ಮುಂಭಾಗದ ಶ್ರೀ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಇದರ ನೆಲಮಹಡಿಯಲ್ಲಿ ಅನುಭವಿ ದಸ್ತಾವೇಜು ಬರಹಗಾರ ಲಕ್ಷ್ಮೀನಾರಾಯಣ ಶೆಣೈ ಮತ್ತು ಈ ಹಿಂದೆ ಮಂಗಳೂರಿನ ಹಿರಿಯ ವಕೀಲರ ಜೊತೆ ವಕೀಲ ವೃತ್ತಿ ಆರಂಭಿಸಿ ಆ ಬಳಿಕ ತಾಲೂಕಿನ ಸಾಗರ್ ಪವರ್ ಪ್ರಾಜೆಕ್ಟ್ ದೊಂಡೊಲೆ ಇಲ್ಲಿ ಕಾನೂನು ಸಲಹೆಗಾರರಾಗಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಯುವ ನ್ಯಾಯವಾದಿ ಶೈಲೇಶ್ ಆರ್. ಠೋಸರ್ ಅವರು ಮತ್ತೊಮ್ಮೆ ಬೆಳ್ತಂಗಡಿಯಲ್ಲಿ ವಕೀಲ ವೃತ್ತಿ ಸೇವೆಗೆ ಲಭ್ಯರಿದ್ದು ಅವರ ಸಾರ್ವಜನಿಕ ಸಂಪರ್ಕ ಕಚೇರಿಯು ಇತ್ತೀಚೆಗೆ ಪ್ರಾರಂಭಗೊಂಡಿತು.
ಹಿರಿಯ ಸಹಕಾರಿ ಶ್ರೀಧರ ಜಿ ಭಿಡೆ, ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಮುಂಡಾಜೆ, ಭೋರೋಕ ಕಿರು ಜಲವಿದ್ಯುತ್ ಯೋಜನೆಯ ಮೆನೇಜರ್ ಗಣೇಶ್ ಶೆಟ್ಟಿ, ಉಜಿರೆಯ ನಿವೃತ್ತ ಡಿಎಫ್‌ಒ ಯು.ಹೆಚ್. ಮುಹಮ್ಮದ್, ಉಜಿರೆಯ ಪ್ರಭಾತ್ ಭಟ್, ಪತ್ರಕರ್ತ ಭುವನೇಶ್ವರ ಜಿ, ಕಟ್ಟಡದ ಮಾಲಕ ರವಿಕುಮಾರ್, ನಂದಿನಿ ಕ್ಯಾಂಟೀನ್‌ನ ಅರೆಕ್ಕಲ್ ರಾಮಚಂದ್ರ ಭಟ್, ಪ್ರಸನ್ನ ಹೆಬ್ಬಾರ್, ರಘುರಾಮ ಶೆಟ್ಟಿ, ಲಕ್ಷ್ಮೀನಾರಾಯಣ ಶೆಣೈ ಅವರ ಮಾತೃಶ್ರೀ ಸುಮತಿ ಭಾಯಿ ಸೇರಿದಂತೆ ಅನೇಕ ಮಂದಿ ಪರಿಚಿತರು ಬೇಟಿ ನೀಡಿ ಶುಭಾಶಯ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.