ವಿಳಂಬವಾಗಿದ್ದ ಅಕ್ರಮ ಸಕ್ರಮ ಹಕ್ಕುಪತ್ರ ಸ್ಥಳದಲ್ಲೇ ವಿತರಣೆ; ಕಡತಗಳಲ್ಲಿ ಲೋಪವೆಸಗುತ್ತಿರುವವರ ಬಗ್ಗೆ ತನಿಖೆಗೆ ಸೂಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

betiಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ
ಪ್ರಮೋದ್ ಮಧ್ವರಾಜ್ ಬೆಳ್ತಂಗಡಿಯಲ್ಲಿ

ಬೆಳ್ತಂಗಡಿ : ಲಂಚದ ಹಣಕ್ಕಾಗಿ ಹಕ್ಕುಪತ್ರ ನೀಡದೆ ಬಾಕಿ ಇರಿಸಿಕೊಂಡಿರುವುದು, ಗ್ರಾಮಕರಣಿಕನಿಂದ ೯೪ ಸಿ ಯೋಜನೆಗೆ ಲಂಚ ಬೇಡಿಕೆ, ಇತ್ಯಾಧಿ ಪ್ರಮುಖ ಬೇಡಿಕೆಗಳು ಮತ್ತು ಸಮಸ್ಯೆಗಳ ಬಗ್ಗೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಅವರ ಕಂದಾಯ ಇಲಾಖಾ ಸಭೆಯಲ್ಲಿ ವಿಷಯ ಬಹಿರಂಗಗೊಂಡಿದೆ.
ಜೂ. ೪ ರಂದು ಶಾಸಕರೂ ಆಗಿರುವ ಪ್ರಮೋದ್ ಮಧ್ವರಾಜ್ ಅವರು ಬೆಳ್ತಂಗಡಿ ತಾಲೂಕು ಕಛೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳ ಸಮೇತ ಜನರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಯತ್ನ ಮಾಡಿದರು. ಇದೇ ವೇಳೆ ಹತ್ತು ಹಲವು ಸಮಸ್ಯೆಗಳು ಅವರ ಮುಂದೆ ಬಂದವು.
ಶಾಸಕ ವಸಂತ ಬಂಗೇರ, ಅಪರ ಜಿಲ್ಲಾಧಿಕಾರಿ ಎಸ್ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಡಾ. ಕೆ.ವಿ. ರಾಜೇಂದ್ರ, ತಹಶೀಲ್ದಾರ್ ಪ್ರಸನ್ನ ಮೂರ್ತಿ, ಜಿಲ್ಲಾ ನೋಂದವಣಾಧಿಕಾರಿ ರವೀಂದ್ರ ಎಲ್. ಪೂಜಾರ್ ಪುತ್ತೂರು ತಹಶಿಲ್ದಾರ್ ಪುಟ್ಟ ಶೆಟ್ಟಿ, ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ, ಜಿ.ಪಂ. ಸದಸ್ಯರಾದ ಪಿ. ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಕೆ.ಕೆ. ಶಾಹುಲ್ ಹಮೀದ್, ಸೌಮ್ಯಲತಾ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ವಿ.ಟಿ. ಸೆಬಾಸ್ಟಿಯನ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ದೇವಕಿ, ಗ್ರಾ.ಪಂ. ಅಧ್ಯಕ್ಷ-ಸದಸ್ಯರುಗಳು ಉಪಸ್ಥಿತರಿದ್ದರು. ಅಕ್ರಮ ಸಕ್ರಮ ಮಂಜೂರಾತಿಗಾಗಿ ಕಳೆದ ೨೦ ವರ್ಷಗಳಿಂದ ತಾಲೂಕು ಕಛೇರಿಗೆ ಅಲೆದು ಅಲೆದು ಸುಸ್ತಾದುದಲ್ಲದೆ ಇತ್ತೀಚೆಗೆ ಸಮಿತಿಯಲ್ಲಿ ಜಾಗ ಮಂಜೂರಾದರೂ ಅದರ ಹಕ್ಕುಪತ್ರ ನೀಡಲು ತಹಶಿಲ್ದಾರರು ಹಿಂದೇಟು ಹಾಕಿದ್ದ ದೂರೊಂದು ಸಭೆಯಲ್ಲಿ ಬಂತು. ಉಜಿರೆ ದೊಂಪದ ಪಲ್ಕೆ ಶಾಲೆ ಬಳಿ ನಿವಾಸಿನಿ, ನಿವೃತ್ತ ಶಿಕ್ಷಕ ರಘುಪತಿ ಭಟ್ ಅವರ ಪತ್ನಿ ಶಾಂತಾ ಅವರಿಗೆ ಮಂಜೂರಾದ ೭೨ ಸೆಂಟ್ಸ್ ಜಾಗದ ಹಕ್ಕುಪತ್ರ ನೀಡುವಲ್ಲಿ ತಹಶಿಲ್ದಾರರು ವಿಳಂಬ ನೀತಿ ಅನುಸರಿಸಿದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಫೈಲಿನಲ್ಲಿ ಕಾರಣವೊಂದನ್ನು ಹುಡುಕಿದ ತಹಶಿಲ್ದಾರರು ಹಕ್ಕುಪತ್ರ ನೀಡಲು ಅಸಾಧ್ಯ ಎಂದು ತಿಳಿಸಿದಾಗ, ವಿಚಾರಿಸಿದ ಅಪರ ಜಿಲ್ಲಾಧಿಕಾರಿ ಎಸ್. ಕುಮಾರ್ ಅವರು, ಈಗ ಫೈಲಿನಲ್ಲಿ ಕಾರಣ ಮತ್ತು ಲೋಪಗಳನ್ನು ಹುಡುಕಬೇಡಿ. ಒಂದು ಬಾರಿ ನೀವೇ ಮಂಜೂರು ಮಾಡಬಹುದು ಎಂದು ಷರ ಬರೆದ ಮೇಲೆ ಮತ್ತೊಮ್ಮೆ ಆಗುವುದಿಲ್ಲ ಎಂದು ಹೇಳುವ ಅಧಿಕಾರ ನಿಮಗಿಲ್ಲ. ಈಗ ಏನಿದ್ದರೂ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡಿ ಎಂದಷ್ಟೇ ಸೂಚನೆ ನೀಡಿದರು. ಪ್ರಮೋದ್ ಮಧ್ವರಾಜ್ ಮತ್ತು ಶಾಸಕ ವಸಂತ ಬಂಗೇರ ಅವರೂ ಆದೇಶಿಸಿದ್ದೂ ಮಾತ್ರವಲ್ಲದೆ ಕಡತ ತರುವಲ್ಲಿ ಮತ್ತೆ ಮತ್ತೆ ತಡವಾದಾಗ ನಾಲ್ಕೈದು ಬಾರಿ ಏನಾಯಿತು ಎಂದು ಇಬ್ಬರೂ ಪ್ರಶ್ನಿಸುತ್ತಲೇ ಇದ್ದರು. ಕೊನೆಗೂ ಅಂತಿಮ ಅವಕಾಶ ನೀಡಿದ ಬಳಿಕ ಹಕ್ಕುಪತ್ರ ಬಂದೇ ಬಂತು. ಅದನ್ನು ಸ್ಥಳದಲ್ಲೇ ರಘುಪತಿ ಭಟ್ ಅವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಮಡಂತ್ಯಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಅವರು, ಇದೊಂದು ಐತಿಹಾಸಿಕ ಕ್ಷಣ. ತಾಲೂಕು ಕಚೇರಿಯಲ್ಲಿ ಇಂತಹದ್ದೇ ಅನೇಕ ಪ್ರಕರಣಗಳು ಇವೆ. ಈ ಪೈಕಿ ಒಂದನ್ನಾದರೂ ಹುಡುಕಿ ತುರ್ತು ಕ್ರಮ ಜರುಗಿಸಿದ್ದಕ್ಕಾಗಿ ಜನತೆಯ ಪರವಾಗಿ ಶಾಸಕರಿಗೆ ಮತ್ತು ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು. ಉಪಸ್ಥಿತರಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಅದನ್ನು ಸ್ವೀಕರಿಸಿದರು.
ಕುಕ್ಕೇಡಿ ಗ್ರಾಮ ಕರಣಿಕ ಜಯಚಂದ್ರ ಅವರು ೯೪ ಸಿ ಯೋಜನೆ ಬಗ್ಗೆ ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಕರೆಸಿದ ಮಧ್ವರಾಜ್ ಅವರು ಅರ್ಜಿದಾರರ ಸಮ್ಮುಖವೇ ವಿಚಾರಣೆ ನಡೆಸಿದರು. ಜಿ.ಪಂ. ಸದಸ್ಯರಿಗೂ ಅವರು ಅಗೌರವ ಸಲ್ಲಿಸಿ ವರ್ತಿಸಿದ್ದಾರೆ ಎಂದು ತಿಳಿದು ಅವರ ಲಂಚ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಜನರಿಂದ ಮಹಜರು ಪ್ರಕೀಯೆ ನಡೆಸಿ ಹೌದೆಂದಾದರೆ ಅಮಾನತಿನಲ್ಲಿಡುವಂತೆ ಸೋಮವಾರದವರಗೆ ಗಡುವು ನೀಡಿ ಎಸಿ ಅವರಿಗೆ ಸಂಸದೀಯ ಕಾರ್ಯದರ್ಶಿಗಳು ಆದೇಶಿಸಿದರು.
ನಡ ದಫನ ಭೂಮಿಯ ಕೈಬರಹದ ಆರ್‌ಟಿಸಿ ಯಲ್ಲಿ ಸ್ಮಶಾನ ಎಂದೂ ಸೇರಿಸಿದ ಕಡತ ತಿದ್ದುಪಡಿ ಪ್ರಕರಣವೊಂದು ತನಿಖೆಯಿಂದ ಬಹಿರಂಗವಾಯಿತು. ಇದಕ್ಕೂ ಮೊದಲು ನಡ ಗ್ರಾ. ಪಂ. ಸದಸ್ಯರೂ ಸೇರಿದಂತೆ ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಲಾಲ ಜಿ.ಪಂ. ಸದಸ್ಯೆ ಸೌಮ್ಯಲತಾ ಅವರನ್ನೊಳಗೊಂಡ ನಿಯೋಗವೊಂದು ಸಂಸದೀಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಇಬ್ಬರು ಫಲಾನುಭವಿಗಳಾಗಿರುವ ಮುಸ್ಲಿಂ ಮಹಿಳೆಯರೂ ಬಂದು ಇದೇ ಜಾಗದಲ್ಲಿ ನಿವೇಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಧ್ವರಾಜ್ ಅವರನ್ನು ಆಗ್ರಹಿಸಿದರು. ಈ ವೇಳೆ ಶಾಸಕರು ಮತ್ತು ಸಂಸದೀಯ ಕಾರ್ಯದರ್ಶಿಗಳು ಅದನ್ನು ನಿರಾಕರಿಸಿ, ಆ ಭೂಮಿ ಹಿಂದೆಯೇ ದಫನಭೂಮಿಯೆಂದು ಮಂಜೂರಾತಿಯಾದ ಜಾಗ. ಅದರಲ್ಲಿ ನಿವೇಶನ ಕೊಡುವುದು ಸಾಧ್ಯವಿಲ್ಲ ಎಂದರು. ಈ ವೇಳೆ ಕಡತ ನಿರ್ವಹಣೆ ಮಾಡುತ್ತಿರುವ ಮಹಿಳಾ ಸಿಬ್ಬಂದಿ ಅನುಪಮ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಶಾಸಕರು ಆರೋಪಿಸಿದರು. ಉದಾಹರಣೆ ಸಮೇತ ಅಪರ ಜಿಲ್ಲಾಧಿಕಾರಿ ಮತ್ತು ಎಸಿ ಅವರ ಗಮನಕ್ಕೆ ತಂದರು. ಈ ವೇಳೆ ಕಡತವನ್ನು ತರಿಸಿಕೊಂಡು ಪರಿಶೀಲಿಸಿದಾಗ ಹಿಂದೆ ಕೈ ಬರಹದ ಆರ್‌ಟಿಸಿಯಲ್ಲಿ ದಫನ ಮಾಡುವ ಸ್ಥಳ ಎಂದು ಮಾತ್ರ ಇದ್ದ ಜಾಗದಲ್ಲಿ ಅದನ್ನು ಬರೆದು ಅದರ ಜೊತೆಗೆ ಸ್ಮಶಾನ ಎಂದು ನಮೂದಿಸಿದ ವಿಚಾರ ಬೆಳಕಿಗೆ ಬಂತು. ಸಂಸದೀಯ ಕಾರ್ಯದರ್ಶಿಗಳು ಕಂದಾಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಆರ್‌ಟಿಸಿ ತಿದ್ದುಪಡಿ ಮಾತ್ರವಲ್ಲದೆ ಆ ತಪ್ಪನ್ನು ಮಾಡಿದ್ದು ಯಾರು ಎಂದು ಇಲಾಖಾ ತನಿಖೆ ನಡೆಸಿ ಅವರಿಗೆ ಪ್ರೇರಣೆ ನೀಡಿದವರ ಮೇಲೂ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಧಾರ್ಮಿಕ ಕೇಂದ್ರಗಳಾದ ಚರ್ಚ್, ಮಸೀದಿ, ದೇವಸ್ಥಾನ, ಮದರಸ, ದರ್ಗಾ, ಈದ್ಗಾ, ದಫನ ಭೂಮಿ ರಾಜರ ಆಡಳಿತ ಕಾಲದಿಂದಲೂ ಮೊದಲ್ಗೊಂಡು ಅನಾದಿ ಕಾಲದಿಂದಲೂ ಸರಕಾರಿ ಜಮೀನಿನಲ್ಲಿದ್ದು ಇನ್ನೂ ಕೂಡ ಸಂಬಂಧಿತ ಸಂಸ್ಥೆಗಳ ಹೆಸರಿನಲ್ಲಿ ದಾಖಲೆಯಾಗಿರುವುದಿಲ್ಲ. ಆದ್ದರಿಂದ ಇಂತಹಾ ಭೂಮಿಯನ್ನು ಆಯಾಯಾ ಸಂಸ್ಥೆಗಳ ಹೆಸರಿನಲ್ಲಿ ಹಕ್ಕುಪತ್ರ ನೀಡುವಂತಾಗಬೇಕು ಎಂದು ಪುತ್ತೂರು ತಾಲೂಕು ಕೊಲ ಗ್ರಾಮದ ಸಂಘಟಕ ಹುಸೈನ್ ಬಡಿಲ ಮಧ್ವರಾಜ್ ಅವರಿಗೆ ಮನವಿ ನೀಡಿದರು.
೮೧ ಗ್ರಾಮಗಳನ್ನೊಳಗೊಂಡ ಬೆಳ್ತಂಗಡಿ ತಾಲೂಕಿನಲ್ಲಿ ಶೇ. ೬೦ ಅಕ್ರಮ ಸಕ್ರಮ ಕಾಯ್ದೆಯಡಿ ಭೂಮಿ ಪಡೆದುಕೊಂಡವರಾಗಿದ್ದು ೨೫ ವರ್ಷ ಕಳೆದರೂ ಇನ್ನೂ ಕೂಡ ಹಿಲ್ ಬ್ಲಾಕ್‌ನಿಂದ ಫ್ಲಾಟಿಂಗ್ ಮಾಡಿಸಲು ಫಾರ್ಮ್ ನಂ ೧ ಮತ್ತು ೫ ರಿಂದ ಆಗಿರುವ ತೊಂದರೆಯನ್ನು ನೀಗಿಸಬೇಕು ಎಂದು ತಾ.ಪಂ. ಸದಸ್ಯೆ ಸುನಿತಾ ರೈ ಮನವಿ ಸಲ್ಲಿಸಿದರು.

ಇನ್ನು ಮುಂದೆ ೫೬ ಸಾವಿರ ಎಕ್ರೆ ಮಾತ್ರ ಡೀಮ್ಡ್ ಫಾರೆಸ್ಟ್
೧.೫೮ ಲಕ್ಷ ಎಕ್ರೆ ಡೀಮ್ಡ್ ಫಾರೆಸ್ಟ್ ಎಂದಿದ್ದುದನ್ನು ಜಂಟಿ ಸರ್ವೆ ನಡೆಸಿದಾಗ ಈ ಪೈಕಿ ೮೬ ಸಾವಿರ ಎಕರೆ ಭೂಮಿ ಅರಣ್ಯ ವಿರಹಿತಗೊಂಡು ಕಂದಾಯ ಇಲಾಖೆಗೆ ಮರಳಿ ದೊರೆತಿದೆ. ಮುಂದಕ್ಕೆ ಆ ಪ್ರದೇಶ ವ್ಯಾಪ್ತಿಯ ಬಾಕಿಯಾಗಿರುವ ಅನೇಕ ಹಳೆಯ ಕಡತಗಳು ಮುಕ್ತಾಯಗೊಳಿಸಲು ಈ ಜಂಟಿ ಸರ್ವೆಯಿಂದ ಅನುಕೂಲವಾಗಲಿದೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.
೯೪ಸಿ ಬಂಗಾರದಂತಹಾ ಯೋಜನೆ:
ಮನೆಯಡಿ ಸಕ್ರಮೀಕರಿಸಿಕೊಂಡು ಹಕ್ಕು ಪಡೆದುಕೊಳ್ಳಲು ೯೪ಸಿ ಮತ್ತು ೯೪ಸಿಸಿ ಯೋಜನೆ ಬಡವರ ಪಾಲಿಗೆ ಬಂಗಾರದಂತಹಾ ಯೋಜನೆ. ಅದರ ಪ್ರಯೋಜನ ಜನತೆಗೆ ಕಲ್ಪಿಸಿಕೊಡುವಲ್ಲಿ ಅಧಿಕಾರಿಗಳು ಬೇಜವಾಬ್ಧಾರಿತನ ತೋರಬಾರದು. ಯಾವುದೇ ಅರ್ಜಿಗಳನ್ನೂ ಶಾಸಕರ ಗಮನಕ್ಕೆ ತಾರದೆ ತಿರಸ್ಕರಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆಜ್ಞೆ ಮಾಡಿದರು.
ತಹಶಿಲ್ದಾರ್‌ರ ಅಸಮರ್ಪಕವಾದ ಇಲಾಖಾ ಸೇವೆಗೆ ಸಂಸದೀಯ ಕಾರ್ಯದರ್ಶಿಗಳು ತೀವ್ರ ಅಸಾಮಾಧಾನ ವ್ಯಕ್ತಪಡಿಸಿದರು. ಕಂದಾಯ ಇಲಾಖೆ ಮೇಲೆ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.
ಕಂದಾಯ ಇಲಾಖೆಯ ಆಡಳಿತದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ನ್ಯೂನತೆ ಹಾಗೂ ತೊಂದರೆಗಳನ್ನು ನಿವಾರಿಸುವ ಬಗ್ಗೆ ಕೆಲವೊಂದು ಸಲಹೆ ಮತ್ತು ಪರಿಹಾರಗಳನ್ನೊಳಗೊಂಡ ಮನವಿಯನ್ನು ಮಧ್ವರಾಜ್ ಅವರಿಗೆ ನಿವೃತ್ತ ಗ್ರಾಮಕರಣಿಕ ಯು. ರಮಾನಾಥ ಅವರು ನೀಡಿದರು.
ಕಲ್ಲೇರಿಯಲ್ಲಿ ನಾಡ ಕಚೇರಿ ಪ್ರಾರಂಭಿಸುವಂತೆ ಈ ಹಿಂದಿನಿಂದಲೂ ಸರಕಾರದ ಗಮನ ಸೆಳೆಯುತ್ತಾ ಬರಲಾಗುತ್ತಿದ್ದರೂ ಮತ್ತೊಮ್ಮೆ ಈ ಸಭೆಯಲ್ಲೂ ಬಾರ್ಯ, ಪುತ್ತಿಲ, ತೆಕ್ಕಾರು, ಕಾಂಗ್ರೆಸ್ ಸಮಿತಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಸಮದ್ ಅವರು ಸಂಸದೀಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು. ಕುಕ್ಕಳ, ಪಾರೆಂಕಿ, ಮಚ್ಚಿನ, ತಣ್ಣೀರುಪಂಥ, ಬಾರ್ಯ, ತೆಕ್ಕಾರು, ಇಳಂತಿಲ, ಬಂದಾರು, ಮೊಗ್ರು, ಬೆಳಾಲು, ಮುಂತಾದ ಗ್ರಾಮಗಳು ಕೊಕ್ಕಡ ನಾಡ ಕಛೇರಿಗೆ ಸಂಬಂಧಿಸಿದ್ದು ಸಣ್ಣ ಕಂದಾಯ ಕೆಲಸಗಳಿಗೂ ಸುತ್ತಿಬಳಸಿ ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ನಮ್ಮ ಸಮಯ, ಮತ್ತು ಹಣ ವ್ಯಯವಾಗುತ್ತಿದೆ. ಆದ್ದರಿಂದ ಈ ಎಲ್ಲಾ ಪ್ರದೇಶಗಳಿಗೆ ಕೇಂದ್ರಸ್ಥಾನದಂತಿರುವ ಕಲ್ಲೇರಿಯಲ್ಲಿ ನಾಡ ಕಚೇರಿ ಪ್ರಾರಂಭಿಸಬೇಕು ಎಂದು ತಿಳಿಸಿದ ಮನವಿಯನ್ನು ಪುರಸ್ಕರಿಸಿದ ಮಧ್ವರಾಜ್ ಅವರು ಇದನ್ನು ಬೆಂಗಳೂರಿನಲ್ಲಿ ಸಂಬಂಧಿತ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಆನ್‌ಲೈನ್‌ನಲ್ಲಿ ನಿಯಮಾನುಸಾರ ಖರೀದಿಸುವ ಅಕ್ರಮ ಸಕ್ರಮ ಭೂಮಿಯು ಫ್ಲಾಟಿಂಗ್ ಆಗದೇ ಇರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ತಾ.ಪಂ. ಮಾಜಿ ಸದಸ್ಯ ಕೇಶವ ಭಟ್ ಅತ್ತಾಜೆ ಅವರು ಕಾರ್ಯದರ್ಶಿಯವರ ಗಮನಸೆಳೆದರು.
ಮಾಜಿ ಸೈನಿಕರ ಸಂಘಕ್ಕೆ ಲಾಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಈಗಾಗಲೇ ಕಂದಾಯ ಇಲಾಖಾ ಎಲ್ಲಾ ನಿಯಮಾವಳಿಗಳ ಪ್ರಕಾರ ೧೦ ಸೆಂಟ್ಸ್ ಭೂಮಿಯನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿ ಸ್ವಾಧೀನತೆಗೆ ಕ್ರಮ ಕೈಗೊಂಡಿದ್ದರೂ ಆರ್‌ಟಿಸಿ ದಾಖಲಾತಿಗಾಗಿ ಸರಕಾರದ ಅನುಮತಿಗಾಗಿ ಕಡತ ಮೈಸೂರಿನಿಂದ ಬೆಂಗಳೂರಿಗೆ ರವಾನೆಯಾಗಿದ್ದರೂ ಇನ್ನೂಕೂಡ ಅಲ್ಲಿಂದ ಕ್ರಮ ಜರುಗದ ಬಗ್ಗೆ ಪ್ರಸ್ತುರ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ನಿಯೋಗ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿತು. ಇಲ್ಲಿ ಎಲ್ಲಾ ವಿಧದಿಂದ ಕಡತ ತಯಾರಾದ ಬಳಿಕ ಆ ಭೂಮಿ ಕುಮ್ಕಿ ಎಂದು ಮೇಲಿನ ಕಛೇರಿಯಿಂದ ಹೇಳಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿದ ಮಧ್ವರಾಜ್ ಅವರು, ಒಂದು ಬಾರಿ ಡಿಸಿ ಅವರು ಷರ ಬರೆದ ಬಳಿಕ ಮತ್ತೊಮ್ಮೆ ಆಕ್ಷೇಪಿಸುವ ಕ್ರಮ ಇಲ್ಲ. ಇದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಡತ ಕಾಣೆಗೆ ಕ್ರಮಕೈಗೊಳ್ಳಬೇಕು, ೯೪ ಸಿ ಸೇರಿದಂತೆ ಇತರ ಕೆಲವು ಸಮಸ್ಯೆಗಳ ಬಗ್ಗೆ ಸಂಸದೀಯ ಕಾರ್ಯದರ್ಶಿಯವರ ಬಳಿ ಮನವಿಗಳು ಬಂದವು. ಕೆಲವೊಂದು ಮನವಿಗಳಿಗೆ ಕಂದಾಯ ಇಲಾಖಾ ಮೇಲಾಧಿಕಾರಿಗಲೇ ಸ್ಥಳದಲ್ಲಿದ್ದುದರಿಂದ ಕ್ಷಣದಲ್ಲೇ ಪರಿಹಾರವೂ ದೊರೆಯಿತು.
ಮುಂಡಾಜೆ ಗ್ರಾಮದ ಕೂಳೂರು ಎಂಬಲ್ಲಿ ಈಗಾಗಲೇ ಸ್ಥಳ ಗುರುತಿಸಿದಲ್ಲಿ ಉದ್ಧೇಶಿಸಲಾಗಿರುವ ತ್ಯಾಜ್ಯದಿಂದ ಗೊಬ್ಬರ ಘಟಕ ಸ್ಥಾಪನೆಯ ಜಾಗವನ್ನು ದೂಂಬೆಟ್ಟು ಎಂಬಲ್ಲಿಗೆ ಬದಲಾಯಿಸುವ ಭಾಗವಾಗಿ ಅಳತೆ ಕಾರ್ಯಕ್ಕೆ ಮುಂದಾಗಿರುವ ಕ್ರಮವನ್ನು ಆಕ್ಷೇಪಿಸಿ ಆ ಬಾಗದ ಪ.ಜಾ. ಮತ್ತು ಪ. ಪಂಗಡದವರು ಮತ್ತು ಉಳಿದ ನಾಗರಿಕರು ಮನವಿ ಸಲ್ಲಿಸಿದರು. ನಿಯೋಗ ಮಾತನಾಡಿ ಡಿಸಿ ಮನ್ನಾ ಭೂಮಿಯ ಬಳಿ ಘಟಕ ನಿರ್ಮಾಣ ಬೇಡ ಎಂದು ಕೇಳಿಕೊಂಡರು. ಈ ವೇಳೆ ಘರಂ ಆದ ಶಾಸಕರು ಎರಡೂ ಕಡೆ ಘಟಕ ಮಾಡುವುದಿಲ್ಲ. ಇಲ್ಲಿಂದ ಹೋಗಿ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.