ಕಳೆಂಜ : ಡಾ ಬಿ ಆರ್ ಅಂಬೇಡ್ಕರ್ 125ನೇ ಜನ್ಮದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ambedkar ಕರ್ಣಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮಶಾಖೆ ಕಳೆಂಜ. ಇದರ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು . ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಜ್ಯೋತಿ ಯವರು ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿ.ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ವಿಶ್ವದ ಜ್ಞಾನದ ಭಂಡಾರ. ದೇಶದ ಸರ್ವನಾಗರೀಕರಿಗೂ ,ಸರ್ವ ಧರ್ಮದವರಿಗೂ ಈ ದೇಶದಲ್ಲಿ ಸಮಾನವಾದ ಹಕ್ಕು ಅಧಿಕಾರಗಳನ್ನು ಸಂವಿಧಾನದಲ್ಲಿ ಒದಗಿಸಿದ್ದರೂ ಕೂಡ ಅವರನ್ನು ಕೇವಲ ದಲಿತನಾಯಕ ಎಂದು ಬಿಂಬಿಸಲಾಗುತ್ತಿದೆ. ಅವರ ಹೋರಾಟದ ಫಲದಿಂದಲೇ ಬಡವರು ಶೋಷಿತರು ಹಿಂದುಳಿದ ವರ್ಗದ ಜನರು ಸಾಮಾಜಿಕವಾಗಿ ಆರ್ಥಿಕವಾಗಿ,ರಾಜಕೀಯವಾಗಿ ,ಶಿಕ್ಷಣದಲ್ಲಿ ಮುಂದಕ್ಕೆ ಬರಲು ಅನುಕೂಲ ಆಯಿತು ಎಂದು ಹೇಳಿದರು. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಚಂದು ಎಲ್ ರವರು ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪಿ ಟಿ ಸೆಬಾಸ್ಟಿನ್ ರವರು ಶೋಷಿತರಾದ ನಾವೆಲ್ಲರೂ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿಣಿಗೆ ಬರಬೇಕು ಎಂದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾದ  ರಾಜಾರಾಮ್ ಹತ್ಯಡ್ಕ ರವರು ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಮನಮುಟ್ಟುವಹಾಗೆ ವಿವರಿಸಿದರು. ತಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್ ,ನಿಡ್ಲೆ ಸಿಎ ಬ್ಯಾಂಕ್ ಅಧ್ಯಕ್ಷರಾದ ಧನಂಜಯ ಗೌಡ, ಕಳೆಂಜ ಪಂಚಾಯತ್ ಸದಸ್ಯರುಗಳಾದ ಪದ್ಮನಾಭ ಗೌಡ, ಕು ಗೀತ,  ದಲಿತ ಮುಖಂಡರಾದ ಬಿಕೆ ವಸಂತ್ ಬೆಳ್ತಂಗಡಿ,  ಜಿಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಕಿರಣ್ ಕುಮಾರ್, ತಾಲೂಕು ಸಂಚಾಲಕರಾದ ವೆಂಕಣ್ಣ ಕೊಯ್ಯರು, ಖಜಾಂಚಿ ಜಯಾನಂದ್ ಕೆ , ತಾಲೂಕುಸಂಘಟನಾ ಸಂಚಾಲಕರುಗಳಾದ ನೇಮಿರಾಜ್ ಕಿಲ್ಲೂರ್, ನಾರಾಯಣ ಪುದುವೆಟ್ಟು, ಹಿರಿಯ ದಲಿತ ಮುಖಂಡರಾದ ಕರಿಯ ನೇಲ್ಯಪಲ್ಕೆ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಜಿಪಂ ಸದಸ್ಯಶೇಖರ್ ಕುಕ್ಕೇಡಿ, ತಾ ಪಂ ಅಧ್ಯಕ್ಷರಾದ ದಿವ್ಯಜ್ಯೋತಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಗೀತಾ, ನಾರಾಯಣ ಪುದುವೆಟ್ಟು, ಪದ್ಮನಾಭಗೌಡ, ತನಿಯಪ್ಪ ಹೊಸ್ಮಠ, ಸಿಎ ಬ್ಯಾಂಕ್ ಅಧ್ಯಕ್ಷ ಧನಂಜಯ್ ಗೌಡ, ರಾಜ್ಯ ಗೇರು ಅಭಿವೃದ್ಧಿ ನಿಗಮದ ನಿರ್ದೇಶಕರಾದ ಚಂದು ಎಲ್ ರವರುಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಮಾಜಿ ಸಂಚಾಲಕರಾದ ಭೈರಪ್ಪ ಕಲ್ಲಗುಡ್ಡೆ ವಹಿಸಿದ್ದು. ದಸಂಸ ಜಿಲ್ಲಾ ಮುಖಂಡ ಶ್ರೀಧರ್ ಕಳೆಂಜ ರವರು ಪ್ರಾಸ್ಥವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.