HomePage_Banner_
HomePage_Banner_
HomePage_Banner_

ಮುಂಡಾಜೆ ತ್ಯಾಜ್ಯ ಘಟಕ : ದುಂಬೆಟ್ಟು ನಾಗರಿಕರಿಂದಲೂ ವಿರೋಧ

78

tyajya 1 ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಳೂರು ಪ್ರದೇಶದಲ್ಲಿ ಪ್ರಸ್ತಾವನೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ಮುಂಡಾಜೆ ಗ್ರಾಮದ ದುಂಬೆಟ್ಟುವಿಗೆ ಸ್ಥಳಾಂತರಿಸಿದರೆ ತೀವ್ರ ವಿರೋಧ ವ್ಯಕ್ತ ಪಡಿಸಿ ಬೆಳ್ತಂಗಡಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಜೂ.4ರಂದು ಗ್ರಾಮಸ್ಥರು ಪಿಡಿಒ ಹಾಗೂ ತಹಶಿಲ್ದಾರರಲ್ಲಿ ಹೋರಾಟ ನಡೆಸುವುದಾಗಿ ದುಂಬೆಟ್ಟು ಪರಿಸರದ ನಾಗರಿಕರು ಮನವಿ ಸಲ್ಲಿಸಿದರು.
ಮುಂಡಾಜೆ ಗ್ರಾಮದ ಕೂಳೂರು ಎಂಬಲ್ಲಿ ಗ್ರಾಮ ಪಂಚಾಯತ್ ಜಾಗದಲ್ಲಿ ಈಗಾಗಲೇ ಪ್ರಸ್ತಾವನೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕ ಇದಕ್ಕೆ ಸ್ಥಳೀಯರ ವಿರೋಧವಿದೆ ಎಂಬ ನೆಲೆಯಲ್ಲಿ ಸದ್ರಿ ಜಾಗವನ್ನು ಬದಲಾಯಿಸುವ ಬಗ್ಗೆ ಆಲೋಚನೆಗಳು ಮತ್ತು ತಯಾರಿಗಳು ನಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಅದರ ಭಾಗವಾಗಿ ಮೇ ೩೧ರಂದು ಶಾಸಕರು, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಸ್ಥಳ ವೀಕ್ಷಣೆ ನಡೆಸಿದ್ದಲ್ಲದೆ ಮುಂಡಾಜೆ ಗ್ರಾಮದ ಚಾಮುಂಡಿನಗರ ದೂಂಬೆಟ್ಟು ಎಂಬಲ್ಲಿಗೆ ಸದ್ರಿ ಘಟಕವನ್ನು ಬದಲಾಯಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿರುವುದು ತಿಳಿದಿರುತ್ತದೆ.
ಆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ/ಎಸ್.ಟಿ) ಕುಟುಂಬಗಳು ಜಾಸ್ತಿಯಾಗಿ ವಾಸಿಸುತ್ತಿದ್ದು, ಹಾಗೂ ೪ ಮಂದಿ ಕೊರಗ ಕುಟುಂಬಗಳಿಗೆ ತಲಾ 1 ಎಕ್ರೆಯಂತೆ ಭೂಮಿ ಮಂಜೂರಾಗಿರುತ್ತದೆ. ಇಲ್ಲಿ ಪುರಾತನ ಕಾಲದ ಕೆರೆ ಮತ್ತು ಇತ್ತೀಚೆಗೆ ಬೋರ್‌ವೆಲ್ ಕೊರೆಯಲಾಗಿದ್ದು ಅದರಲ್ಲಿ ಉತ್ತಮ ನೀರು, ಅಲ್ಲದೆ ನೀರಿನ ಟ್ಯಾಂಕಿ ಕೂಡ ಲಭ್ಯವಿದೆ. ಹತ್ತಿರದಲ್ಲೇ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ ಇದ್ದು ಇಲ್ಲಿರುವ ಆದಿವಾಸಿ ಜನ, ದಲಿತ ಸಮುದಾಯದವರ ಮೇಲೆ ಕಾಳಜಿ ಇರಿಸಿ ಈ ತ್ಯಾಜ್ಯ ವಿಲೇವಾರಿ ಘಟಕವನ್ನು ಈ ಪ್ರದೇಶದಲ್ಲಿ ನಿರ್ಮಿಸಬಾರದೆಂದು, ಹಾಗೂ ಅದಾಗ್ಯೂ ಈ ಪ್ರದೇಶವನ್ನು ಆಯ್ಕೆಗೊಳಿಸಿದ್ದೇ ಆದರೆ ದಲಿತ ಜನಾಂಗದವರು ಹಾಗೂ ಈ ಪ್ರದೇಶವಾಸಿಗಳು ಜೊತೆಯಾಗಿ ಹೋರಾಟಗಳನ್ನು ಸಂಘಟಿಸುವುದಲ್ಲದೇ ಕಾನೂನಾತ್ಮಕ ಹೋರಾಟವನ್ನು ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.