ಬೈಕ್‌ಗಳ ಕಳ್ಳತನ ನಾಲ್ವರು ಅಂತಾರಾಜ್ಯ ಬೈಕ್ ಕಳ್ಳರ ಬಂಧನ ಬೆಳ್ತಂಗಡಿಯಲ್ಲಿ ಕಳ್ಳತನಗೈದಿದ್ದ ಬೈಕ್ ಕೂಡ ವಶಕ್ಕೆ

Baik Kallaru copy

bike kallaru copy ಬೆಳ್ತಂಗಡಿ : ಬೈಕ್‌ಗಳನ್ನು ಕಳ್ಳತನಗೈಯ್ಯುತ್ತಿದ್ದ ಐವರು ಅಂತಾರಾಜ್ಯ ಕಳ್ಳರನ್ನು ವಿಟ್ಲ ಪೊಲೀಸರು ಬಂಧಿಸಿದ್ದು ಈ ಪೈಕಿ ಬೆಳ್ತಂಗಡಿಯ ಸಂತೆಕಟ್ಟೆ ಪವರೋನ್ ಬ್ಯಾಟರಿ ಅಂಗಡಿ ಮಾಲಿಕ ಶೀಥಲ್ ಅವರಿಂದ ಕಳವುಗೈದಿರುವ ಯಮಹಾ ಎಫ್.ಝೆಡ್ ಬೈಕನ್ನೂ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪುತ್ತೂರು ತಾಲೂಕು ಕಸಬಾ ಗ್ರಾಮದ ಮನ್ಸೂರ್(19ವ.), ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಶಬೀರ್(19ವ.), ಕಬಕ ಪೊಳ್ಯ ನಿವಾಸಿ ತೌಫೀಕ್(22ವ.) ಮತ್ತು ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಲ್‌ಪಲ್ಕೆ ನಿವಾಸಿ ಮುಜೀದ್(25ವ.) ಎಂಬವರೆಂದು ಗುರುತಿಸಲಾಗಿದೆ.
ಇವರಿಂದ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದಿರುವ ಯಮಹಾ ಆರ್ ಎಕ್ಸ್ 100 ಬೈಕ್ 1, ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ೨ ಹೋಂಡಾ ಡಿಯೋ ಸ್ಕೂಟರ್‌ಗಳು, ಸುಳ್ಯದಿಂದ ಕಳವುಗೈದಿದ್ದ ಪಲ್ಸರ್ ಬೈಕ್, ಬೆಳ್ತಂಗಡಿಯಿಂದ ಕಳವುಗೈದಿದ್ದ ಯಮಹಾ ಎಫ್.ಝೆಡ್. ಬೈಕ್, ಪುತ್ತೂರಿನಿಂದ ಕಳವುಗೈದಿದ್ದ ಹೋಂಡಾ ಡಿಯೋ ಸ್ಕೂಟರ್ ಮತ್ತು ಯಮಹಾ ಏಫ್ ಝೆಡ್ 3ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೇ 26 ರಂದು ವಿಟ್ಲ ಠಾಣಾ ವ್ಯಾಪ್ತಿಯ ನೆಟ್ಲಮುಡ್ಲೂರು ಎಂಬಲ್ಲಿ ಬೈಕಿನಲ್ಲಿ ಬರುತ್ತಿದ್ದ ಇಬ್ಬರನ್ನು ಪೊಲೀಸ್ ನಾಕಾ ಬಂದಿಯ ವೇಳೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಈ ಎಲ್ಲಾ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.