ಬೆಳ್ತಂಗಡಿ ಹೊಲಿರೆಡೀಮರ್ ಶಾಲಾ ವಿಸ್ತರಣಾ ಕಟ್ಟಡದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

holy redemeer 1 copy

holy redemeer copy

holy redemerr copy

ಬೆಳ್ತಂಗಡಿ : ಇಲ್ಲಿಯ ಹೊಲಿರೆಡೀಮರ್ ಆಂಗ್ಲಮಾಧ್ಯಮ ಶಾಲಾ ಕಟ್ಟಡದ ವಿಸ್ತರಣಾ ಕಟ್ಟಡದ ಆಶೀರ್ವಚನವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಎಲೋಸಿಯಸ್ ಪೌಲ್ ಡಿಸೋಜ ಜೂ.1 ರಂದು ನೆರವೇರಿಸಿ ಶುಭ ಹಾರೈಸಿದರು.
ಧರ್ಮಾಧ್ಯಕ್ಷರಾಗಿ 20ನೇ ವರ್ಷಚರಣೆಯಲ್ಲಿರುವ ಬಿಷಪ್ ಎಲೋಸಿಯಸ್ ಪೌಲ್ ಡಿಸೋಜರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ವಂ.ಪಾ| ಬೊನವೆಂಚರ್ ನಜ್ರೆಸ್, ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ| ಅನಿಲ್ ಡಿಸಿಲ್ವ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಅರ್ವಿನ್ ಡಿಸೋಜ, ಚರ್ಚ್‌ಪಾಲನಾ ಮಂಡಳಿಯ ಕಾರ್ಯದರ್ಶಿ ಎಲೋಸಿಯಸ್ ಲೋಬೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿನ್ಸೆಂಟ್ ಟಿ. ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಂ.ಪಾ| ಜೆ.ವಿ ಸಲ್ಡಾನ್ಹ, ಉದ್ಯಮಿ ರಮಾನಂದ ಸಾಲಿಯಾನ್, ಶ್ರೀಮತಿ ಜೆಸಿಂತಾ ಮೊನೀಸ್, ಕಥೊಲಿಕ್ ಬ್ಯಾಂಕ್ ಅಧ್ಯಕ್ಷ ಹೆನ್ರಿ ಲೋಬೊ, ನಿರ್ದೇಶಕ ಲಾರೆನ್ಸ್ ಡೇಸಾ, ಕಥೊಲಿಕ್ ಸಭಾ ನಿಕಟಪೂರ್ವ ವಲಯಾಧ್ಯಕ್ಷ ವಾಲ್ಟರ್ ಮೋನಿಸ್, ಇಂಜಿನಿಯರ್ ಲಾರೆನ್ಸ್ ಕುಟಿನ್ಹಾ, ಕಾಂಟ್ರಕ್ಟರ್ ಮೆಲ್ವಿನ್ ಫೆರ್ನಾಂಡಿಸ್, ಪಟ್ಟಣ ಪಂಚಾಯತ್‌ನ ಸದಸ್ಯ ಜೇಮ್ಸ್ ಡಿಸೋಜ, ಕಾಶ್ಮೀರ್ ಮಿನೇಜಸ್, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಮೇರಿ ಸುಜಾ ಸ್ವಾಗತಿಸಿ, ಶಿಕ್ಷಕಿ ಏಂಜಲ್ ಮರಿಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.