ಮುಂಡಾಜೆ ಪ್ರಸ್ತಾವಿತ ತ್ಯಾಜ್ಯ ಘಟಕ ಸ್ಥಳ ಶಾಸಕರು-ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Advt_NewsUnder_1
Advt_NewsUnder_1
Advt_NewsUnder_1

  mundaje thyajya (2) copyದೂಂಬೆಟ್ಟು  ಮೋಂಟಕೆರೆ ಜಾಗದ ಸರ್ವೆಗೆ ಸೂಚನೆ

ಮುಂಡಾಜೆ : ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಕೂಳೂರು(ದೇವಸ್ಯ) ಎಂಬಲ್ಲಿ ಈಗಾಗಲೇ ಗ್ರಾ. ಪಂ ಮೀಸಲಿರಿಸಿದ ಸ್ಥಳದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡುವ ಬಗ್ಗೆ ಸರಕಾರದಿಂದ 20 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಸದ್ರಿ ಸ್ಥಳದ ಬಗ್ಗೆ ಆ ಪ್ರದೇಶವಾಸಿಗಳಿಂದ ತೀವ್ರ ವಿರೋಧ, ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮತ್ತು ಪರ್ಯಾಯ ಜಾಗದ ಹುಡುಕಾಟದ ಭಾಗವಾಗಿ ಶಾಸಕ ವಸಂತ ಬಂಗೇರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮೇ. 31 ರಂದು ಸ್ಥಳಕ್ಕೆ ಭೇಟಿ ನೀಡಿದರು.
ಕೂಳೂರು ಘಟಕ ಪ್ರದೇಶಕ್ಕೆ ಭೇಟಿ ನೀಡಿ ಈಗ ಪ್ರಸ್ತಾವನೆಯಾಗಿರುವ ಸ್ಥಳವನ್ನು ಮೊದಲಾಗಿ ಪರಿಶೀಲಿಸಿದರು.
ಪರ್ಯಾಯ ಜಾಗಕ್ಕಾಗಿ ಸ್ಥಳ ಪರಿಶೀಲನೆ:
ದೂಂಬೆಟ್ಟು ಎಂಬಲ್ಲಿನ ಮೋಂಟಕೆರೆ ಎಂಬಲ್ಲಿ ಸರಕಾರಿ ಜಾಗ ಇದೆ ಎಂದು ಗ್ರಾಮ ಕರಣಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅಲ್ಲಿ ತೆರಳಿ ಶಾಸಕರು ಸ್ಥಳವೀಕ್ಷಣೆ ನಡೆಸಿದರು. ಇಲ್ಲಿ 7ಎಕ್ರೆ ಡಿ. ಸಿ ಮನ್ನಾ ಭೂಮಿ ಇದ್ದು ಅದರಲ್ಲಿ 4 ಕೊರಗ ಕುಟುಂಬಗಳಿಗೆ ತಲಾ ಒಂದೊಂದು ಎಕ್ರೆಯಂತೆ ಮಂಜೂರಾಗಿಯಾಗಿದೆ. ಉಳಿದ ಜಾಗದಲ್ಲಿ 2 ಎಕ್ರೆ ಜಾಗ ಲಭ್ಯವಿದೆ ಎಂದು ಗ್ರಾಮ ಕರಣಿಕರು ತಿಳಿಸಿದರು. ಈ ವೇಳೆ ಆ ಜಾಗವನ್ನು 2ದಿನದಲ್ಲಿ ಅಳತೆ ನಡೆಸಿ ವರದಿ ನೀಡುವಂತೆ ಶಾಸಕರು ತಿಳಿಸಿದರು.
ಇಲ್ಲಿರುವ ಹೆಚ್ಚುವರಿ ಭೂಮಿಯ ಪೈಕಿ ಈಗಾಗಲೇ ಅತಿಕ್ರಮಣವಾಗಿದ್ದು ಅದರಲ್ಲಿ ಕೃಷಿ ಮಾಡಲಾಗಿದೆ ಎಂದು ಗ್ರಾ.ಪಂ. ಸದಸ್ಯರು ಶಾಸಕರ ಗಮನಕ್ಕೆ ತಂದರು. ಮುಂದಿನ ಸರ್ವೆ ವರದಿ ಬಂದ ಬಳಿಕ ಕ್ರಮಕೈಗೊಳ್ಳೋಣ ಎಂದ ಶಾಸಕರು, ಜಾಗದ ಲಭ್ಯತೆ ಬಳಿಕ ದುರ್ವಾಸನೆ ಏಳದಂತೆ ಸೂಕ್ತ ನಿರ್ವಹಣೆ ಮಾಡುವ ಜವಾಬ್ಧಾರಿ ಗ್ರಾಮ ಪಂಚಾಯತ್‌ನದ್ದೇ ಆಗಿದೆ ಎಂದು ತಿಳಿಸಿದರು.
ಶಾಸಕರ ಆಗಮನದ ವೇಳೆ ಉಜಿರೆ ಜಿ. ಪಂ ಸದಸ್ಯೆ ನಮಿತಾ, ನೆರಿಯ ತಾ.ಪಂ ಸದಸ್ಯ ವಿ. ಟಿ ಸೆಬಾಸ್ಟಿಯನ್, ಶತಾಬ್ಧಿ ವಿದ್ಯಾಲಯ ಸಮಿತಿ ಅಧ್ಯಕ್ಷ ಶ್ರೀಧರ ಜಿ ಭಿಡೆ, ಗ್ರಾ. ಪಂ ಅಧ್ಯಕ್ಷೆ ಶಾಲಿನಿ ವಿಜಯಕುಮಾರ್, ಉಪಾಧ್ಯಕ್ಷೆ ವಸಂತಿ ರಾಜ್‌ಗೋಪಾಲ್, ಸದಸ್ಯರಾದ ನಾರಾಯಣ ಗೌಡ ದೇವಸ್ಯ, ಸುಮನಾ ಗೋಖಲೆ, ಚೆನ್ನಕೇಶವ ನಾಯ್ಕ, ಅಶ್ವಿನಿ ಅರವಿಂದ ಹೆಬ್ಬಾರ್, ಅಬ್ದುಲ್ ಅಝೀಝ್, ಗಣೇಶ್ ಬಂಗೇರ ಕೂಳೂರು, ಸುರೇಶ್ ಹೆಗ್ಡೆ, ಯಂಗ್‌ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಅಧ್ಯಕ್ಷ ನಾಗರಾಜ ನಾಯ್ಕ, ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್ ಗೋಖಲೆ, ಸತ್ಯನಾರಾಯಣ ಹೊಳ್ಳ, ವಾಸು ಪೂಜಾರಿ, ರಮೇಶ್ ಆಚಾರ್ಯ, ಸುಂದರ ನಾಯ್ಕ, ಬಾಲಕೃಷ್ಣ ಶೆಟ್ಟಿ, ಸಿದ್ದೀಕ್ ಸಾಗರ್, ಲೆತೀಫ್, ಇಬ್ರಾಹಿಂ ಕುರುಡ್ಯ, ಸಿವಿಲ್ ಗುತ್ತಿಗೆದಾರ ಮುಹಮ್ಮದ್ ಮತ್ತು ಅಬೂಬಕ್ಕರ್, ಬಶೀರ್, ಮಾಧವ ಮಾಸ್ಟ್ರ್ ಮೊದಲಾದವರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಸುಂದರ ಶೆಟ್ಟಿ, ಉಜಿರೆ ಉಪವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ, ಪಂಚಾಯತ್ ಪಿಡಿಒ ಸಂಜೀವ ನಾಯ್ಕ, ಸಿಬ್ಬಂದಿಗಳಾದ ಗಿರಿಯಪ್ಪ ಗೌಡ, ನಾರಾಯಣ ನಾಯ್ಕ, ಜಗನ್ನಾಥ, ಗ್ರಾಮಕರಣಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.