ನೇರ ಸಾಲ ಯೋಜನೆಯಲ್ಲಿ ಖರೀದಿಸಿದ ಲಾರಿ ಕೀ ಹಸ್ತಾಂತರ ಭೂ ಅಭಿವೃದ್ಧಿ ಬ್ಯಾಂಕ್‌ಗೆ ರೂ.೨ಕೋಟಿ : ಬಂಗೇರ

Sala hasthanthara copy ಬೆಳ್ತಂಗಡಿ : ನೇರ ಸಾಲ ಯೋಜನೆಯಲ್ಲಿ ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸರಕಾರ ರೂ.2 ಕೋಟಿ ಮಂಜೂರುಗೊಳಿಸಿದ್ದು, ಈಗಾಗಲೇ ರೂ.1 ಕೋಟಿ ಬಿಡುಗಡೆಗೊಂಡಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನಿಂದ ನಬಾರ್ಡ್ ನೇರ ಪ್ರವರ್ತಿತ ರೀ  ಫೈನಾನ್ಸ್  ಯೋಜನೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ರೂ. 11.47 ಲಕ್ಷ ಸಾಲ ಪಡೆದು ಸಾವ್ಯ ಗ್ರಾಮದ ಕೃಷಿಕ ಶಿವಣ್ಣ ಪೂಜಾರಿ ಅವರು ಖರೀದಿಸಿದ ಲಾರಿಯ ಕೀಯನ್ನು ಜೂ.1ರಂದು ಶಿವಣ್ಣ ಪೂಜಾರಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು ಕೃಷಿಕರು ಬ್ಯಾಂಕ್‌ನಿಂದ ಸಾಲವನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು. ಪಡೆದ ಸಾಲದ ಕಂತನ್ನು ಸಮಯಕ್ಕೆ ಸರಿಯಾಗಿ ಕಟ್ಟುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನಿಂದ ಬ್ಯಾಂಕ್ ಆರಂಭವಾಗಿ 65 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಲಾರಿ ಖರೀದಿಗೆ ಸಾಲ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಎಂ. ಈಶ್ವರ್ ಭಟ್ ಸ್ವಾಗತಿಸಿ, ಭೂ ಅಭಿವೃದ್ಧಿ ಬ್ಯಾಂಕ್‌ಗೆ ನೇರ ಸಾಲ ಯೋಜನೆಯಲ್ಲಿ ರೂ.2 ಕೋಟಿ, ಕಟ್ಟಡ ನಿರ್ಮಾಣಕ್ಕೆ ರೂ.7ಲಕ್ಷ ಸೇರಿದಂತೆ ಬ್ಯಾಂಕ್‌ನ ಅಭಿವೃದ್ಧಿಗೆ ಶಾಸಕರು ಪೂರ್ಣ ಸಹಕಾರ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಮೆನೇಜರ್ ವೆಂಕಪ್ಪಯ್ಯ, ಬ್ಯಾಂಕ್‌ನ ನಿರ್ದೇಶಕರಾದ ಶುಭಕರ ಪೂಜಾರಿ ನಾರಾವಿ, ಕುಟ್ಟಿಚ್ಚ ಮೊಗೇರ, ಪಳನಿಸ್ವಾಮಿ, ಹರೀಶ್ ಗೌಡ, ಬ್ಯಾಂಕ್‌ನ ಸಿಬಂದಿ ವರ್ಗದವರು, ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.