ಪಿಯುಸಿ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿನಿ ಪಡಂಗಡಿಯ ದಕ್ಷಾ ಪ್ರವೀಣ್‌ಚಂದ್ರ ಜೈನ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ (ಚಿತ್ರ)

daksha jain copyಬೆಳ್ತಂಗಡಿ: ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಮೂಲಕ ಈ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದಿರುವ ಪಡಂಗಡಿ ದಕ್ಷಾ ಜೈನ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಆಕೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ, ಜೆಡಿಎಸ್ ತಾಲೂಕು ಅಧ್ಯಕ್ಷರೂ ಆಗಿದ್ದು ಪ್ರಸ್ತುತ ಮೂಡಬಿದ್ರೆಯಲ್ಲಿ ಕಿಯೋನಿಕ್ಸ್ ಕಂಪ್ಯೂಟರ‍್ಸ್ ಸಂಸ್ಥೆ ನಡೆಸುತ್ತಿರುವ ಪ್ರವೀಣ್‌ಚಂದ್ರ ಜೈನ್ ಮತ್ತು ಗೃಹಿಣಿ ಮಲ್ಲಿಕಾ ಜೈನ್ ದಂಪತಿಯ ಪುತ್ರಿ. ಈಕೆಗೆ ಇಕಾನಾಮಿಕ್ಸ್‌ನಲ್ಲಿ ೧೦೦, ಬಿಸಿನೆಸ್ ಸ್ಟಡೀಸ್‌ನಲ್ಲಿ ೧೦೦, ಎಕೌಂಟೆನ್ಸಿಯಲ್ಲಿ ೧೦೦, ಕಂಪ್ಯೂಟರ್ ಸೈನ್ಸ್‌ನಲ್ಲಿ ೧೦೦ ಅಂಕಗಳಲ್ಲದೆ, ಸಂಸ್ಕೃತದಲ್ಲಿ ೯೯ ಮತ್ತು ಇಂಗ್ಲೀಷ್‌ನಲ್ಲಿ ೯೪ ಅಂಕಗಳು ಲಭಿಸಿದ್ದು ಅಪೂರ್ವ ಸಾಧನೆ ತೋರಿದ್ದಾರೆ. ಈಕೆ ೧೦ ನೇ ತರಗತಿಯಲ್ಲೂ ಕೂಡ ರೋಟರಿ ಶಾಲೆಯಲ್ಲಿ ೯೭.೧೨ ಶೇಕಡಾ ಅಂಕ ಪಡೆದಿದ್ದರು. ಮುಂದೆ ಐಎಎಸ್ ಪರೀಕ್ಷೆ ಬರೆದು ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಇರಾದೆ ಹೊಂದಿರುವ ಈಕೆಯ ಈ ಸಾಧನೆಯಿಂದ ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ ಮತ್ತು ಬೆಳ್ತಂಗಡಿ ತಾಲೂಕಿಗೆ ಕೀರ್ತಿ ಬಂದಿದೆ.
ಈ ಬಾರಿಯ ವಿಶೇಷತೆಯೆಂದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಲಾಯಿಲ ಸೈಂಟ್ ಮೇರಿ ಶಾಲಾ ವಿದ್ಯಾರ್ಥಿ ಸುಶ್ರೂತ್ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದರೆ, ಪಿಯುಸಿಯಲ್ಲಿ ತಾಲೂಕಿನ ಪಡಂಗಡಿ ಗ್ರಾಮದ ವಿದ್ಯಾರ್ಥಿನಿ ದಕ್ಷಾ ಜೈನ್ ದ್ವಿತೀಯ ಸ್ಥಾನಿಯಾಗುವ ಮೂಲಕ ತಾಲೂಕಿನ ಕೀರ್ತಿ ಪತಾಕೆಯನ್ನು ರಾಜ್ಯಮಟ್ಟದಲ್ಲಿ ಎತ್ತರಕ್ಕೆ ಹಾರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.