HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಿವೃತಿಯ ನಂತರವೂ ಕಂದಾಯ ಇಲಾಖೆಯಲ್ಲಿ ಕರ್ತವ್ಯ: ದೂರು

tahashildara  ಬೆಳ್ತಂಗಡಿ: ಇಲ್ಲಿನ ಕಂದಾಯ ಇಲಾಖೆಯಲ್ಲಿ ಉಪತಹಶಿಲ್ದಾರರಾಗಿ ನಿವೃತಿ ಹೊಂದಿದ ಬಳಿಕವೂ ಇಲಾಖಾ ಕರ್ತವ್ಯಕ್ಕೆ ಬರುತ್ತಿದ್ದ ರಘುಚಂದ್ರ ಆಚಾರ್ ಅವರ ವಿರುದ್ಧ ರಾಷ್ಟ್ರೀಯ ಮಾನವ ಅಧಿಕಾರ ಕೇಂದ್ರದ ಸದಸ್ಯ ಅಜಯ್ ಜಾಕೂಬ್ ಅವರು ಲೋಕಾಯುಕ್ತಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮೇ. 26 ರಂದು ಜಿಲ್ಲಾಧಿಕಾರಿ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಅವರ ಬಗ್ಗೆ ಸರಕಾರಿ ನೌಕರರಾಗಿರುವ ಶಾಸಕರ ಆಪ್ತ ಕಾರ್ಯದರ್ಶಿ ಪ್ರಶಾಂತ್ ಬಳೆಂಜ ಅವರು ಮೌಖಿಕ ದೂರು ಸಲ್ಲಿಸಿದ್ದರು. ಈ ವೇಳೆ ತಹಶಿಲ್ದಾರ್ ಅವರನ್ನು ವಿಚಾರಿಸಿದ ಡಿಸಿ ಅವರು, ಅನುಭವದ ಮೇಲೆ ಅವರನ್ನು ಇಟ್ಟುಕೊಳ್ಳಲಾಗಿದೆ ಎಂದು ತಹಶಿಲ್ದಾರ್ ತಿಳಿಸಿದಾಗ, ಅಂತಹಾ ಕ್ರಮ ಇಲಾಖೆಯಲ್ಲಿಲ್ಲ. ಹಾಗೆ ಬೇಕಾದಲ್ಲಿ ಅವರನ್ನು ನಿಮ್ಮ ಮನೆಯಲ್ಲಿ ಇರಿಸಿಕೊಂಡು ಡೈರಿ ಬರೆಸಬಹುದು ಎಂದು ಖಡಕ್ ಆಗಿ ತಿಳಿಸಿದ್ದರು. ಅವರು ಕಚೇರಿಯಲ್ಲಿ ಇನ್ನು ಮುಂದೆ ಕೆಲಸ ಮಾಡುವುದು ಕಂಡರೆ ವೀಡಿಯೋ ಸಹಿತ ದಾಖಲೆಯೊಂದಿಗೆ ದೂರು ನೀಡುವಂತೆ ತಿಳಿಸಿದ್ದರು. ಇದಾದ ಮರುದಿನ ಅವರು ಮತ್ತೆ ಕಚೇರಿಯಲ್ಲಿದ್ದುದನ್ನು ಭಾವಚಿತ್ರ ಸಹಿತ ದೂರುದಾರರು ಅಡಕಗೊಳಿಸಿ ದೂರು ಸಲ್ಲಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.