ಲಾಯಿಲ : ಗ್ರಾ.ಪಂ ಕಡತಗಳು ಸೇಫ್

amulya 55ಬೆಳ್ತಂಗಡಿ : ಮೇ 25 ರಂದು ಆಕಸ್ಮಿಕವಾಗಿ ಬೆಂಕಿ ಹೊಗೆ ಕಾಣಿಸಿಕೊಂಡು ನೆರೆಹೊರೆಯವರ ಮಾಹಿತಿಯಂತೆ   ಸಿಬ್ಬಂದಿಗಳು, ಸಾರ್ವಜನಿಕರು, ಅಗ್ನಿಶಾಮಕ ದಳದವರು ಒಟ್ಟಾಗಿ ದುರಂತವನ್ನು ತಪ್ಪಿಸಿದ್ದಾರೆ ಎಂದು ಗ್ರಾ.ಪಂ ಅಧ್ಯಕ್ಷೆ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ತಿಳಿಸಿದ್ದಾರೆ. ಪ್ರಾಮಾಣಿಕ ಸೇವೆಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತ ಬಂದಿದೆ, ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುತ್ತಿರುವುದು ವಿಷಾದನೀಯ, ಇದನ್ನು ಆಡಳಿತ ವರ್ಗ ಖಂಡಿಸುತ್ತದೆ. ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭ ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.
ಈ ಅವಘಡದ ವೇಳೆ ಗ್ರಾ.ಪಂ ಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಉಪ ಕಾರ್ಯದರ್ಶಿ ಎನ್.ಆರ್ ಉಮೇಶ್, ತಹಶೀಲ್ದಾರರು, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಂಜಿನಿಯರ್ ಸಿ.ಆರ್, ನರೇಂದ್ರ, ಜಿ.ಪಂ ಸದಸ್ಯರಾದ ಸೌಮ್ಯಲತಾ, ಜಯಂತ ಗೌಡ, ಮಮತಾ ಎಂ.ಶೆಟ್ಟಿ,ಕೆ, ಕೊರಗಪ್ಪ ನಾಕ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ತಾ.ಪಂ ಸದಸ್ಯರಾದ ಶಶಿಧರ.ಎಂ, ಸುಧೀರ್ ಸುವರ್ಣ, ಉದ್ಯಮಿ ರಂಜನ್ ಗೌಡ, ತಾ.ಪಂ ಮಾಜಿ ಸದಸ್ಯರಾದ ಜಯಂತ ಕೋಟ್ಯಾನ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಲಾಯಿಲ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾನಂದ ಶೆಟ್ಟಿ, ಮೋಹನ ಗೌಡ, ಮಾಜಿ ಸದಸ್ಯರು, ತಾ.ಪಂ ಮಾಜಿ ಉಪಾಧ್ಯಕ್ಷ ಚಂದು ಎಲ್, ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಭಾಕರ ಆಚಾರ‍್ಯ, ಪಂ ಅಭಿವೃದ್ಧಿ ಅಧಿಕಾರಿಗಳು. ಲಾಯಿಲ ಗ್ರಾಮಸ್ಥರು ಭೇಟಿ ನೀಡಿ ಸಲಹೆ ಸಾಂತ್ವನ ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.