ಎಂಡೋ ಸಂತ್ರಸ್ತರ ಪಾಲನಾ ಕೇಂದ್ರ ತಾತ್ಕಾಲಿಕ ಮುಚ್ಚುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕೊಕ್ಕಡದ ಎಂಡೋ ಸಂತ್ರಸ್ತರ ಪಾಲನಾ ಕೇಂದ್ರ ಮೇ.26ರಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸರಕಾರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಹಯೋಗದಿಂದ ನಡೆಯುತ್ತಿದ್ದು ಸಂತ್ರಸ್ತರನ್ನು ಕೊಂಡೊಯ್ಯುವ ವಾಹನಗಳ ಬಾಡಿಗೆಯ ವಿಚಾರದಲ್ಲಿ ಮುಚ್ಚಲು ನಿರ್ಧರಿಸಿದ್ದಾರೆ. 2012ರಲ್ಲಿ ಆರಂಭವಾದ ಕೇಂದ್ರಕ್ಕೆ 1.25 ಕೋ ರೂ ಸರಕಾರದಿಂದ ಮಂಜೂರಾಗಿದೆ. 4ವರ್ಷಗಳಿಂದ ಸಂತ್ರಸ್ತರನ್ನು ಕೊಂಡೊಯ್ಯುತ್ತಿರುವ ವಾಹನಗಳ ಬಾಡಿಗೆ ೫೨ ಲಕ್ಷ ರೂಪಾಯಿ ವೆಚ್ಚವಾಗಿದೆ. ವಾಹನಗಳ ಮಾಸಿಕ ಬಾಡಿಗೆ 31 ಸಾವಿರ ನೀಡುತ್ತಿದ್ದು ಇನ್ನು ಮಂದೆ 19 ಸಾವಿರ ಮಾತ್ರ ನೀಡಬೇಕೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ವಾಹನಗಳಿಗೆ ಟೆಂಡರ್ ಕರೆಯಲಾಗಿದ್ದು ಅನಂತರವಷ್ಟೇ ಕೇಂದ್ರಗಳು ಪುನರಾಂಭಿಸಲಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.