ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್‌ನಿಂದ ಸಿಯೋನ್ ಆಶ್ರಮಕ್ಕೆ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1

ashraf 11ಮುಂಡಾಜೆ: ಮುಂಡಾಜೆ ಅನಂತ ಫಡ್ಕೆ ಮೆಮೋರಿಯಲ್ ಸೋಶಿಯಲ್ ಏಂಡ್ ವೆಲ್ಫೇರ್ ಟ್ರಸ್ಟ್ ಇದರ ವತಿಯಿಂದ ಸಿಯೋನ್ ಆಶ್ರಮ ಟ್ರಸ್ಟ್‌ಗೆ 20 ಸಾವಿರ ರೂ. ಗಳ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಮೇ. 27 ರಂದು ಗಂಡಿಬಾಗಲಿ ಆಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ಸಂಚಾಲಕ ಪ್ರಹ್ಲಾದ ಫಡ್ಕೆ, ಯಂಗ್ ಚಾಲೆಂಜರ‍್ಸ್ ಸಂಚಾಲಕ ಲ| ನಾಮದೇವ ರಾವ್ ಅವರು ದೇಣಿಗೆ ಮೊತ್ತದ ಚೆಕ್ಕನ್ನು ಸಂಸ್ಥೆಯ ವ್ಯವಸ್ಥಾಪಕಿ ಸಂಧ್ಯಾ ಅವರಿಗೆ ಹಸ್ತಾಂತರಿಸಿದರು. ಪತ್ರಕರ್ತ ಲ| ಅಶ್ರಫ್ ಆಲಿಕುಂಞಿ ವಿಷಯ ಮಂಡಿಸಿದರು. ಈ ಸಂದರ್ಭ ಆಶ್ರಮದಲ್ಲಿರುವ ಸುಮಾರು 300 ರಷ್ಟು ವಿವಿಧ ಬಗೆಯ ರೋಗಿಗಳು ಹಾಗೂ ಅನಾಥರನ್ನು ಭೇಟಿ ಮಾಡಿದ ಟ್ರಸ್ಟ್‌ನ ಪದಾಧಿಕಾರಿಗಳು ಅಲ್ಲಿನ ವ್ಯವಸ್ಥೆ ಮತ್ತು ಸುಮಾರು 40 ರಷ್ಟು ಜಾನುವಾರುಗಳಿರುವ ಹೈನುಗಾರಿಕಾ ವಿಭಾಗ, ಸುಸಜ್ಜಿತ ಕ್ಯಾಂಟೀನ್ ಇತ್ಯಾಧಿ ವ್ಯವಸ್ಥೆಗಳನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು. ಸಂಸ್ಥೆ ನಡೆಸುತ್ತಿರುವ ಕಾರ್ಯವನ್ನು ಸ್ಲಾಘಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.