ಮದ್ದಡ್ಕ: 1 ಕೋಟಿ ರೂ ವೆಚ್ಚದಲ್ಲಿ ನೂತನ ಮಸೀದಿಗೆ ನಾಳೆ ಕೂರತ್ ತಂಙಳ್‌ರಿಂದ ಶಿಲಾನ್ಯಾಸ

 masid ಮದ್ದಡ್ಕ: ಇಲ್ಲಿನ ನೂರುಲ್‌ಹುದಾ ಜುಮ್ಮಾ ಮಸೀದಿಯು ೪೦ ವರ್ಷಗಳಷ್ಟು ಹೆಳೆಯದಾಗಿದ್ದು ಭವಿಷ್ಯದ ಚಿಂತನೆಯೊಂದಿಗೆ ಮುಂದಕ್ಕೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಮಸೀದಿಗೆ ಮೇ 29 ರಂದು(ನಾಳೆ) ಪೂರ್ವಾಹ್ನ ಕೂರತ್ ತಂಙಳ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾ| ಸುನ್ನೀ ಸಂಯುಕ್ತ ಜಮಾತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ಎಸ್‌ಎಮ್‌ಎ ರೀಜಿನಲ್ ಸಮಿತಿ ಅಧ್ಯಕ್ಷ ಬದ್ರುದ್ದೀನ್ ಪರಪ್ಪು, ಎಸ್ಸೆಸ್ಸೆಫ್ ಡಿವಿಷನ್ ಎಕ್ಸ್‌ಕ್ಯೂಟಿವ್ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ ಸೇರಿದಂತೆ ಅನೇಕ ಗಣ್ಯ ಮಹನೀಯರು ಭಾಗಿಯಾಗಲಿದ್ದಾರೆ.
ಜಮಾತ್‌ನ ಪ್ರಮುಖರಾದ ಕೋಶಾಧಿಕಾರಿ ಎಂ ಉಮರಬ್ಬ ಮದ್ದಡ್ಕ, ಸಾಗರ್ ಮುಹಮ್ಮದ್ ಹಾಜಿ, ಯೂಸುಫ್ ಕೆಎಸ್‌ಆರ್‌ಟಿಸಿ, ಜೊತೆ ಕಾರ್ಯದರ್ಶಿ ಹೈದರ್ ಮೇಸ್ತ್ರಿ, ಎಂ. ಹೆಚ್ ಅಬೂಬಕ್ಕರ್. ಎಂ. ಹೆಚ್ ಅಬ್ದುಲ್ಲ ಚಿಲಿಂಬಿ, ರಹೀಮ ಚಿನ್ನು ಫಾಸ್ಟ್‌ಫುಡ್, ಉಪಾಧ್ಯಕ್ಷ ಎಚ್. ಎಂ ಹಸನಬ್ಬ, ರಫೀಕ್ ಟಿಂಬರ್, ಮಸೀದಿ ಕಾರ್ಯದರ್ಶಿ ಅಬೂಸ್ವಾಲಿಹ್, ಆದಂ ಮೊದಲೆ, ಸೇರಿದಂತೆ ಮದರಸದ ವಿದ್ಯಾರ್ಥಿಗಳು, ಮಸೀದಿ ಧರ್ಮಗುರುಗಳಾದ ಮುಹಮ್ಮದ್ ರಫೀಕ್ ಅಹ್‌ಸನಿ ಸೇರಿದಂತೆ ಜಮಾತ್‌ನ ಸದಸ್ಯರುಗಳು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.