ಬೆಳ್ತಂಗಡಿ ಮಂಜುಶ್ರೀ ಜೇಸಿಸ್‌ನಿಂದ ಸುಶೃತ್‌ಗೆ ಸನ್ಮಾನ

jci blt sushruth ge sanmana copy ಬೆಳ್ತಂಗಡಿ : ಈ ಬಾರಿಯ ಎಸ್ಸೆಸ್ಸಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳ್ತಂಗಡಿ ಸೈಂಟ್‌ಮೇರಿಸ್ ಶಾಲೆಯ ವಿದ್ಯಾರ್ಥಿ ಸುಶೃತ್ ಯು.ಕೆ 624ಅಂಕಗಳನ್ನು ಪಡೆದು ತಾಲೂಕು ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಬೆಳ್ತಂಗಡಿಗೆ ಹಾಗೂ ಶಾಲೆಗೆ ಕೀರ್ತಿ ತಂದ ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಜುಶ್ರೀ ಜೇಸಿಸ್‌ನ ವತಿಯಿಂದ ಮೇ.24 ರಂದು ಘಟಕದ ಅಧ್ಯಕ್ಷ ಜೇಸಿ ವಸಂತ ಶೆಟ್ಟಿಯವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಶೃತ್ ಯು.ಕೆ ನಾನು ಯಾವುದೇ ಕೋಚಿಂಗ್ ಕ್ಲಾಸ್‌ಗೆ ಹೋಗದೆ ಈ ಸಾಧನೆ ಮಾಡಿದ್ದೇನೆ. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಹೆತ್ತವರ ಹಾಗೂ ಶಾಲಾ ಎಲ್ಲಾ ಅಧ್ಯಾಪಕರ ಆಶೀರ್ವಾದದಿಂದ ಈ ಸಾಧನೆ ಮಾಡುವಂತಾಯಿತು ಎಂದರು.
ಈ ಸಂದರ್ಭದಲ್ಲಿ ಜೇಸಿ ಘಟಕದ ಪೂರ್ವಧ್ಯಕ್ಷರುಗಳಾದ ಸಂತೋಷ್ ಕುಮಾರ್ ಜೈನ್, ಕೇಶವ ಪೈ, ಶ್ರೀನಾಥ್ ಕೆ.ಎಂ, ಪಿ.ಆರ್ ನಾಯಕ್, ನಾರಾಯಣ ಶೆಟ್ಟಿ, ಘಟಕದ ಉಪಾಧ್ಯಕ್ಷರುಗಳಾದ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಲಾಲ, ಜೊತೆ ಕಾರ್ಯದರ್ಶಿ ರಂಜಿತ್ ಹೆಚ್.ಡಿ ಸುಧಾಮ, ಜೂನಿಯರ್ ಜೇಸಿ ಅಧ್ಯಕ್ಷ ಸ್ಮಿತೇಶ್ ಬಾರ್ಯ, ಅಬ್ದುಲ್ ಪಾಶಾ, ಸಂತೋಷ್ ಶೆಟ್ಟಿ, ವಿನ್ಸೆಂಟ್, ಪ್ರಿತಂ ಶೆಟ್ಟಿ, ಯತೀಶ್, ಮನೋಜ್ ಅನುಚಂದ್ ಹಾಗೂ ಸುಶೃತ್‌ನ ತಾಯಿ ಸುರೇಖಾ ಹಾಗೂ ಜೇಸಿ ಬಂಧುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.