ತಾಯಿಗೆ ಹೊಡೆದ ಮಗ, ಸೊಸೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲು

Advt_NewsUnder_1
Advt_NewsUnder_1
Advt_NewsUnder_1

  ಧರ್ಮಸ್ಥಳ : ಜಾಗದ ವೀಲ್ ಎಗ್ರಿಮೆಂಟ್ ವಿಚಾರವಾಗಿ ತಾಯಿಗೇ ಮಗ ಮತ್ತು ಸೊಸೆ ಇಬ್ಬರೂ ಸೇರಿ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ ಘಟನೆ ಬೆಳಾಲು ಗ್ರಾಮದಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಮಾಯ ಶಿವಕೃಪಾ ನಿವಾಸಿ ಕುಸುಮಾವತಿ ಅವರೇ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದವರು. ಅವರಿಗೆ ಪುತ್ರ ರಾಘವೇಂದ್ರ ಮತ್ತು ಅವರ ಪತ್ನಿ (ಸೊಸೆ) ದಾಕ್ಷಾಯಿನಿ ಅವರು ಹಲ್ಲೆ ನಡೆಸಿರುವುದಾಗಿ ಆಪಾದಿಸಲಾಗಿದೆ. ಮೇ 5 ರಂದು ಒಂದು ಬಾರಿ ಇವರ ನಡುವೆ ಜಗಳವಾಗಿತ್ತು. ಆ ಬಳಿಕ ಮತ್ತೊಮ್ಮೆ ನಡೆದ ಮಾತುಗಾರಿಕೆ ತಾಯಿಗೇ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದೆ. ಈ ಸಂಬಂಧ ಕುಸುಮಾವತಿ ನೀಡಿರುವ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.