ಜು.1 ರಿಂದ ಪೂರಕ ಪರೀಕ್ಷೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಮೇ 25ರಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣರಾಗಿರುವವರಿಗೆ ಹಾಗೂ ಹಿಂದಿನ ಪರೀಕ್ಷೆಗಳಲ್ಲಿ ನಪಾಸಾಗಿರುವ ಅಭ್ಯರ್ಥಿಗಳಿಗೆ ಜುಲೈ ೧ರಿಂದ ೧೩ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.
ಫಲಿತಾಂಶ ಪ್ರಕಟಣೆ ಬೆನ್ನಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಜು.1ರಿಂದ 13ರವರೆಗೆ ಬೆಳಗ್ಗೆ 9ರಿಂದ12.15ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5.15ರವರೆಗೆ ಎರಡು ಹಂತದಲ್ಲಿ ವಿವಿಧ ವಿಷಯಗಳಿಗೆ ಪೂರಕ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಶುಲ್ಕ ಪಾವತಿಸಲು ಜೂ.೬ ಕೊನೆಯ ದಿನವಾಗಿದ್ದು, ಒಂದು ವಿಷಯಕ್ಕೆ 101ರೂ, ಎರಡು ವಿಷಯಕ್ಕೆ 201ರೂ ಮತ್ತು ಮೂರು ಅಥವಾ ಅದಕ್ಕೂ ಹೆಚ್ಚಿನ ವಿಷಯಗಳಿಗೆ 302 ರೂ ಮತ್ತು ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳೂ ಕಡ್ಡಾಯವಾಗಿ 36 ರೂ. ಅಂಕಪಟ್ಟಿ ಶುಲ್ಕ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಈಗಾಗಲೇ ಪರೀಕ್ಷೆ ಬರೆದು ಬಂದಿರುವ ಫಲಿತಾಂಶ ತಿರಸ್ಕರಿಸಿ ಮತ್ತೊಮ್ಮೆ ಪೂರ್ಣ ಪರೀಕ್ಷೆ ಬರೆಯಲಿಚ್ಚಿಸುವವರಿಗೆ ಇದೇ ಮೊದಲ ಬಾರಿಗೆ ಫಲಿತಾಂಶ ತಿರಸ್ಕರಣಾ ಶುಲ್ಕ ನಿಗದಿಪಡಿಸಲಾಗಿದೆ. ಪ್ರಥಮ ಬಾರಿಗೆ ಫಲಿತಾಂಶ ತಿರಸ್ಕರಿಸುವವರಿಗೆ ಒಂದು ವಿಷಯಕ್ಕೆ 126 ರೂ, ಎರಡು ಹಾಗೂ ಹೆಚ್ಚು ಸಲ ತಿರಸ್ಕರಿಸಿದವರಿಗೆ ಒಂದು ವಿಷಯಕ್ಕೆ 252ರೂ ಶುಲ್ಕ ನಿಗದಿಪಡಿಸಲಾಗಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) ವಿಷಯಗಳಲ್ಲಿ ಅನುತ್ತೀರ್ಣವಾಗಿರುವ ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು 2017ರ ವಾರ್ಷಿಕ ಪರೀಕ್ಷೆವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ಪಿಸಿಎಂಬಿ ಹೊರತುಪಡಿಸಿ ವಿಜ್ಞಾನ ವಿಭಾಗದ ಇತರೆ ವಿಷಯಗಳು ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳಲ್ಲಿ ಅನುತ್ತೀರ್ಣರಾಗಿರುವವರಿಗೆ ಹಳೆಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು 2018ರ ವಾರ್ಷಿಕ ಪರೀಕ್ಷೆವರೆಗೆ ಅವಕಾಶ ಇರಲಿದೆ.
ಪೂರಕ ಪರೀಕಷೆ ವೇಳಾಪಟ್ಟಿ
ಜು.1 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ (ಬೆಳಗ್ಗೆ)
ಜು.2 ಅರ್ಥಶಾಸ್ತ್ರ, ಗಣಿತ (ಬೆಳಗ್ಗೆ), ತರ್ಕಶಾಸ್ತ್ರ, ಗೃಹವಿಜ್ಞಾನ (ಮಧ್ಯಾಹ್ನ)
ಜು.4  ಇಂಗ್ಲಿಷ್ (ಬೆಳಗ್ಗೆ)
ಜು.5 ಬಿಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಶಿಕ್ಷಣ (ಬೆಳಗ್ಗೆ)
ಜು.7  ಕನ್ನಡ, ತೆಲುಗು, ತಮಿಳು, ಮಳಯಾಳಂ, ಫ್ರೆಂಚ್ (ಬೆಳಗ್ಗೆ)
ಮರಾಠಿ, ಅರೇಬಿಕ್ (ಮಧ್ಯಾಹ್ನ)
ಜು.8 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ (ಬೆಳಗ್ಗೆ)
ಜು.9 ಇತಿಹಾಸ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ (ಬೆಳಗ್ಗೆ)
ಜು.11 ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಬೇಸಿಕ್ ಮ್ಯಾಥ್ಯು (ಬೆಳಗ್ಗೆ)
ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ (ಮಧ್ಯಾಹ್ನ)
ಜು.12 ಹಿಂದಿ, ಸಂಸ್ಕೃತ (ಬೆಳಗ್ಗೆ). ಉರ್ದು(ಮಧ್ಯಾಹ್ನ)
ಜು.13 ಐಚ್ಛಿಕ ಕನ್ನಡ (ಬೆಳಗ್ಗೆ)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.