ಹಿಂದೂ ಸಂಘಟನೆಗಳಿಂದ ನರಸಿಂಹಗಢ ಚಲೋ

Advt_NewsUnder_1
Advt_NewsUnder_1
Advt_NewsUnder_1

Narasimhagada chalo 1 copyಬೆಳ್ತಂಗಡಿ : ಗಡಾಯಿಕಲ್ಲಿನ ಹೆಸರನ್ನು ಜಮಲಾಬಾದ್ ಕೋಟೆ ಎಂದು ಮಾಡದೇ ನರಸಿಂಹಗಢ ಮಾಡಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಗಳಿಂದ ಮೇ.22ರಂದು ರ‍್ಯಾಲಿ ನಡೆಯಿತು.
ನರಸಿಂಹ ಜಯಂತಿಯಿಂದ ಹೋರಾಟ ಆರಂಭಿಸಲಾಗಿದ್ದು ನಿರಂತರ ಹೋರಾಟ ನಡೆಯಲಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಗಡಾಯಿಕಲ್ಲು ನರಸಿಂಹ ದೇವಸ್ಥಾನದ ವರೆಗೆ ಬೈಕ್ ರ‍್ಯಾಲಿ ನಡೆಯಿತು. ತಾಲೂಕಿನ ೮೧ ಗ್ರಾಮಗಳಿಂದ ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಬಜರಂಗದಳ ಕರ್ನಾಟಕ ಪ್ರಾಂತ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್, ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ವಿಹಿಂಪ ಜಿಲ್ಲಾಧ್ಯಕ್ಷ ಡೀಕಯ್ಯ ಪೆರುವೋಡಿ ಧರ್ಮ ಜಾಗರಣ ಪರಿಷತ್ ಸಂಚಾಲಕ, ನ್ಯಾಯವಾದಿ ಹರೀಶ್ ಪೂಂಜ, ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ವಿಹಿಂಪ ನಡ ಕಾರ್ಯದರ್ಶಿ ದಾಸಪ್ಪ ಗೌಡ ಮೊದಲಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.