ಸ್ವಸಹಾಯ ಸಂಘಗಳಿಗೆ ಐಡಿಬಿಐ ಚೇರ್‌ಮೇನ್ ಭೇಟಿ

skdrdp idbi chairman beti copyಬೆಳ್ತಂಗಡಿ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬೆಳ್ತಂಗಡಿ ವಲಯದ ನಡಕಾರ್ಯಕ್ಷೇತ್ರದ ಸೊರಕೆ ಬಿ ಪ್ರಗತಿಬಂಧುತಂಡ, ಪಂಚಮಿ ಜ್ಞಾನವಿಕಾಸಕೇಂದ್ರ, ಲಾಲದ ಸಿಂಧೂರ ಬಿ ಸ್ವಸಹಾಯ ಸಂಘಕ್ಕೆ ಐಡಿಬಿಐಚೇರ್ ಮೇನ್‌ಕಿಶೋರ್‌ಖಾರಟ್ ಭೇಟಿ ನೀಡಿದರು. ಈ ಸಂದರ್ಭದಲ್ಲಿತಂಡದ ಸದಸ್ಯರಲ್ಲಿ ಮಾತನಾಡಿ ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸ್ವ-ಉದ್ಯೋಗ,ಶಿಸ್ತು ಬದ್ಧ ವ್ಯವಹಾರ, ಪ್ರಗತಿಬಂಧುತಂಡದ ವಾರದ ಶ್ರಮವಿನಿಮಯಯೋಜನೆಯ ಹಲವು ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯಕಾರ್ಯಕ್ರಮದ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರಾದಡಾ| ಎಲ್.ಎಚ್.ಮಂಜುನಾಥ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀನಿವಾಸನ್, ಸಿ.ಜಿ.ಎಂ.ಗಳಾದ ನಾರಾಯಣ ಮೂರ್ತಿ, ಸುರೇಶ್‌ಕಾಕತ್ಕರ್, ಜಿ.ಎಂ.ಗಳಾದ ವರ್ಗೀಸ್, ಕೃಷ್ಣನ್, ಡಿ.ಜಿ.ಎಂ.ರವರಾದ ಮಂಜುನಾಥ್, ಯೋಜನೆಯ ಬಿ.ಸಿ.ಸುವಿಧಾ ವಿಭಾಗದ ನಿರ್ದೇಶಕರಾದ ಪ್ರಕಾಶ್‌ರಾವ್, ಯೋಜನಾಧಿಕಾರಿ ವಿಶ್ವಾಸ್, ತಾಲೂಕಿನಯೋಜನಾ ಧಿಕಾರಿ ಶ್ರೀಮತಿ ರೂಪಾ ಜಿ ಜೈನ್, ಬೆಳ್ತಂಗಡಿ ವಲಯದ ಮೇಲ್ವಿಚಾರಕ ಸುರೇಶ್‌ಗೌಡ, ಕನ್ಯಾಡಿ ಒಕ್ಕೂಟದ ಅಧ್ಯಕ್ಷರಾದ ತನಿಯಪ್ಪಗೌಡ ಮತ್ತುಲಾಲ ವಿಭಾಗದಸೇವಾಪ್ರತಿನಿಧಿ ಶ್ರೀಮತಿ ಪುಷ್ಪಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.