HomePage_Banner_
HomePage_Banner_
HomePage_Banner_

ಯುವಕ ಸಂಘಗಳ ಕಾರ್ಯಚಟುವಟಿಕೆಗೆ ಸರಕಾರದ ಪ್ರೋತ್ಸಾಹ ಸಿಕ್ಕಿದರೆ ಉತ್ತಮ: ಶಾಸಕ ವಸಂತ ಬಂಗೇರ

Advt_NewsUnder_1

bbb  ಬೆಳ್ತಂಗಡಿ: ಯುವಕ ಸಂಘಗಳ ಕಾರ್ಯಚಟುವಟಿಕೆಗೆ ಮತ್ತು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಿಗೆ ಸರಕಾರ ಪ್ರೋತ್ಸಾಹ ನೀಡಿದರೆ ಉತ್ತಮ ಸಾಧನೆ ನಿರೀಕ್ಷಿಸಬಹುದು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಮೇ. 25 ರಂದು ಇಲ್ಲಿನ ತಾ.ಪಂ ಸಭಾಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ತಾಲೂಕು ಪಂಚಾಯತ್ ಬೆಳ್ತಂಗಡಿ ಮೂಲಕ ತಾಲೂಕಿನ 2 ಶಾಲೆಗಳಿಗೆ ಮತ್ತು 2 ಕ್ರೀಡಾ ಸಂಘಗಳಿಗೆ ಆಟದ ಸಾಮಾಗ್ರಿ ಮತ್ತು ಆರ್ಥಿಕ ಸಹಕಾರದ ಚೆಕ್ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಿ ಅವರು ಮಾತನಾಡಿದರು.
ಬಯಲು ರಂಗಮಂದಿರ ನಿರ್ಮಾಣಕ್ಕಾಗಿ ಆರಂಬೋಡಿ ಸರಕಾರಿ ಹಿ. ಪ್ರಾ ಶಾಲೆ 1 ಲಕ್ಷ ರೂ. ಗಳ ಡಿ.ಡಿ ಯನ್ನು ಈ ಸಂದರ್ಭ ನೀಡಲಾಯಿತು.
ಈ ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಜಿ.ಪಂ ಸದಸ್ಯರಾದ ನಮಿತಾ, ಕೆ. ಕೆ ಶಾಹುಲ್ ಹಮೀದ್, ಪಿ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಕೆ. ಕೊರಗಪ್ಪ ನಾಯ್ಕ ಮತ್ತು ಸೌಮ್ಯಾಲತಾ ಜಯಂತ ಗೌಡ, ತಾ.ಪಂ ಇಒ ಎಸ್. ಎನ್ ಭಟ್ ಉಪಸ್ಥಿತರಿದ್ದರು. ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಯಾನಂದ ಲಾಲ ಸಹಕರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.