ವಿದ್ಯುತ್ ಲೈನಿನ ಮೇಲೆ ರಬ್ಬರ್ ಮರ ಬಿದ್ದು ದಿನ ೧೨ ಆಗಿದೆ…..ಇನ್ನೂ ತೆಗೆದಿಲ್ಲ!?

Advt_NewsUnder_1
Advt_NewsUnder_1
Advt_NewsUnder_1

kalenja ಕಳೆಂಜ: ಕಳೆಂಜ ಗ್ರಾಮದ ಚಾಕೊಟೆದಡಿ ಎಂಬಲ್ಲಿ ಭಾರೀ ಗಾಳಿಗೆ ವಿದ್ಯುತ್ ಮೈನ್‌ಲೈನಿನ ಮೇಲೆ ರಬ್ಬರ್ ಮರದ ರೆಂಬೆಯೊಂದು ತುಂಡಾಗಿ ಬಿದ್ದು 12 ದಿನಗಳೇ ಆಗಿದೆ. ಆದರೂ ಮೆಸ್ಕಾಂ ಇಲಾಖೆಯಿಂದ ಅದನ್ನು ತೆರವುಗೊಳಿಸಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಅಲ್ಲಿನ ಜನ ವಯರ್‌ಗೆ ಪೈಪ್ ಅಳವಡಿಸಿದ್ದರಿಂದ ವಿದ್ಯುತ್ ಶಾರ್ಟ್ ಆಗಿ ವ್ಯತ್ಯಯವಾಗಿಲ್ಲ. ಆದರೆ ಮರದ ರೆಂಬೆ ತೆಗೆಯದಿದ್ದರೆ ಒಂದೋ ಲೈನ್‌ತುಂಡಾಗುವ ಸಾಧ್ಯತೆ ಇದೆ. ಅಥವಾ ಕಂಬಕ್ಕೂ ಹಾನಿಯಾಗಬಹುದು ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೆಸ್ಕಾಂ ನೀಡಿದ ಮಾಹಿತಿ ಆಧರಿಸಿ ಮರುದಿನವೇ ಅಧಿಕಾರಿಗಳು ಬಂದು ವೀಕ್ಷಿಸಿ ಹೋಗಿದ್ದು ಇನ್ನೂ ಪರಿಹಾರಕ್ಕೆ ಮುಂದಾಗಿಲ್ಲ ಎಂಬುದು ನಾಗರಿಕರ ದೂರು

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.