ಗ್ರಾಮೀಣ ಕ್ರೀಡಾಕೂಟಗಳಿಗೆ ಸರ್ಕಾರದ ನೆರವು ಅತ್ಯಗತ್ಯ : ಹರೀಶ್ ಕುಮಾರ್.

kreede

ಮಾಚಾರು: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳಿಗೆ ಸರ್ಕಾರದ ನೆರವು ಸಿಗುತ್ತಿಲ್ಲ. ಸಾರ್ವಜನಿಕರೇ ಧನ ಸಂಗ್ರಹಿಸಿ ಕ್ರೀಡಾಕೂಟಗಳನ್ನು ನಡೆಸಬೇಕಾಗಿದೆ. ಇದರಿಂದ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳೆಯಲು ತೊಂದರೆ ಎದುರಿಸುವಂತಾಗಿದೆ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
ಅವರು ಪ್ರಗತಿ ಯುವಕ ಮಂಡಲ ಮಾಚಾರು, ಲಕ್ಷ್ಮೀನಾರಾಯಣ ಭಜನಾ ಮಂಡಳಿ ಮಾಚಾರು ಮತ್ತು ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಳ್ತಂಗಡಿ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಮಾತನಾಡಿ, ಯುವಕರು ದುಶ್ಚಟಕ್ಕೆ, ದುಷ್ಟಕೂಟಗಳಿಗೆ ಸೇರದೆ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದು ಹೇಳಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಉಜಿರೆ ಆರ್.ಎಂ. ಅರ್ಥ್ ಮೂವರ್ಸ್ ಮಾಲಕ ರವಿಚಂದ್ರ ಚಕ್ಕಿತ್ತಾಯ, ಗ್ರಾ.ಪಂ.ಸದಸ್ಯರಾದ ಕೂಸಪ್ಪ ಗೌಡ, ಬಿ.ಎಂ.ಇಲ್ಯಾಸ್, ಗ್ರಾ. ಪಂ. ಮಾಜಿ ಸದಸ್ಯ ರಾಮಯ್ಯ ಗೌಡ, ಪ್ರಗತಿ ಯುವಕ ಮಂಡಲ ಅಧ್ಯಕ್ಷ ಸುಂದರ ಬಂಗೇರ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಗ್ರಾ.ಪಂ.ಅಧ್ಯಕ್ಷ ಶ್ರೀಧರ ಪೂಜಾರಿ ಶುಭ ಹಾರೈಸಿದರು. ಶಿಕ್ಷಕರಾದ ಸುರೇಶ್ ಮಾಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದಿನೇಶ್ ಮಾಚಾರ್ ಸ್ವಾಗತಿಸಿದರು .ಶಿವರಾಮ್ ಪಿ. ಪ್ರಸ್ತಾಪಿಸಿ, ಮೋಹನ್ ಹೆಚ್. ಬಿ. ವಂದಿಸಿದರು.
ಚಿತ್ರ\ವರದಿ: ಸುರೇಶ್ ಮಾಸ್ಟರ್.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.