ಕಡವೆ ಹಾರಿ ಬೈಕ್ ಪಲ್ಟಿ ಗ್ರಾ.ಪಂ. ಸದಸ್ಯನಿಗೆ ಗಾಯ

  ಕೊಕ್ಕಡ : ರಾತ್ರಿ ಸಮಯ ಕಾಡು ರಸ್ತೆಯಲ್ಲಿ ಕಡವೆ ಬೈಕ್‌ನ ಮೇಲೆ ಹಾರಿದ ಪರಿಣಾಮ ಕೊಕ್ಕಡ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕುಶಾಲಪ್ಪ ಗೌಡ ಹಾಗೂ ಅವರ ಪುತ್ರ ವಿಶ್ವರಂಜಿತ್ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ.
ಕುಶಾಲಪ್ಪ ಗೌಡ ಅವರು ಸುಮಾರು ೭.೩೦ಕ್ಕೆ ಬೆಳಾಲಿನ ತಮ್ಮ ಸಂಬಂಧಿಕರ ಮನೆಗೆ ತನ್ನ ಪುತ್ರನ ಜೊತೆ ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ಬರುತ್ತಿರುವಾಗ ಪರಾಪೆ ಎಂಬಲ್ಲಿ ಕಾಡುದಾರಿಯಲ್ಲಿ ಕಡವೆಯೊಂದು ಲೈಟಿಗೆ ಹೆದರಿ ಬೈಕ್‌ನ ಮೇಲೆಯೇ ಹಾರಿತ್ತು. ಈ ಸಮಯ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಬಿದ್ದು ಕುಶಾಲಪ್ಪ ಗೌಡರ ಕೈಗೆ ಗಂಭೀರ ಏಟು ತಗಲಿದೆ. ಪುತ್ರನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಈ ರಸ್ತೆಯಲ್ಲಿ ಇದೇ ರೀತಿಯ ಒಂದೆರಡು ಘಟನೆಗಳು ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.