ರುಡ್‌ಸೆಟ್ : ಸ್ವ-ಉದ್ಯೋಗ ತರಬೇತಿ

rudset swa udhyoga arivuಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ-ಉದ್ಯೋಗ ತರಬೇತಿಯ ಬಗ್ಗೆ ಅರಿವು ಕಾರ್ಯಾಗಾರವು ಮೇ.6 ರಂದು ನಡೆಯಿತು.
ರುಡ್‌ಸೆಟ್ ಸಂಸ್ಥೆಯ ಮೂಲ ಧ್ಯೇಯ ಸಮಾಜದಲ್ಲಿ ಇರುವಂತಹ ಯುವಜನತೆಗೆ ಸ್ವ ಉದ್ಯೋಗವನ್ನು ಕಲ್ಪಿಸಿಕೊಡುವುದು ಹಾಗೂ ಅವರನ್ನು ಆಸ್ತಿವಂತರನ್ನಾಗಿ ನಿರ್ಮಾಣ ಮಾಡುವುದು ಎಂದು ಹೇಳುತ್ತಾ ಬಿ.ಎಡ್.ಪದವಿ ತನ್ನದೇ ಆದಂತಹ ಅನುಭವವನ್ನು ಹೊಂದಿದೆ.
ಮುಂದಿನ ದಿನಗಳಲ್ಲಿ ಹಲವಾರು ಅವಕಾಶಗಳು ಕಾದಿದೆ. ಯಶಸ್ಸು ಸಿಗಲಿ ಎಂದು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜಿತ್ ರಾಜಣ್ಣ ಶುಭಹಾರೈಸಿದರು. ಹಿರಿಯ ಉಪನ್ಯಾಸಕ ಅಬ್ರಾಹಂ ಜೇಮ್ಸ್ ಇವರು ಸಂಸ್ಥೆಯ ಕಾರ್ಯಗಳ ಬಗ್ಗೆ ಕೂಲಂಕುಶವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಬಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಕೆ ಮತ್ತು ಕಾರ್ಯಕ್ರಮದ ಸಂಯೋಜಕಿ ಎಸ್.ಡಿ.ಎಂ.ಬಿ.ಇಡಿ. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶೈಲಜ ಎ.ಆರ್. ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಯಾದ ಗೌರೀಶ್ ಸ್ವಾಗತಿಸಿ, ಕು.ಸೌಮ್ಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.