ಸುಶಿಕ್ಷಿತ ಸಮಾಜ ಸೃಷ್ಠಿ ಕಾಲಘಟ್ಟದ ಬೇಡಿಕೆ: ಉಸ್ತಾದ್

belthangady darudala college ge chalaneಬೆಳ್ತಂಗಡಿ ದಾರುಸ್ಸಲಾಂ ದಅವಾ ಕಾಲೇಜಿಗೆ ಚಾಲನೆ

   ಬೆಳ್ತಂಗಡಿ :- ಯಾವುದೇ ಸಮಾಜ ಪ್ರಗತಿ ಸಾಧಿಸಬೇಕಿದ್ದರೆ ಶಿಕ್ಷಣ ಅಗತ್ಯವಾಗಿದ್ದು ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸುಶಿಕ್ಷಿತ ಪ್ರತಿಭಾವಂತ ಸಮಾಜದ ಸೃಷ್ಟಿಯೂ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಸ್ತದ ಅಧೀನದಲ್ಲಿ ಇಂದು ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳನ್ನು ದೇಶ ವಿದೇಶಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಸಮಸ್ತದ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ಹೇಳಿದರು.
ಅವರು ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ಮೈದಾನದಲ್ಲಿ ದಾರುಸ್ಸಲಾಂ ಇಸ್ಲಾಮಿಕ್ ಕಾಂಪ್ಲೆಕ್ಸ್ ಮತ್ತು ಖಿಳ್‌ರಿಯಾ ಜುಮಾ ಮಸೀದಿ ಇದರ ಜಂಟಿ ಸಹಯೋಗದಲ್ಲಿ ದಾರುಸ್ಸಲಾಂ ದಅವಾ ಕಾಲೇಜಿಗೆ ಚಾಲನೆ ನೀಡಿ ಮಾತನಾಡಿದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ವಿಶ್ವೇತರ ವಿಧ್ವಾಂಸರಾದ ವರಕ್ಕಲ್ ಮುಲ್ಲಕೋಯ ತಂಙಳ್, ಶಂಸುಲ್ ಉಲಮಾ ಮೊದಲಾದ ಸಾತ್ವಿಕರಾದ ಆಶೀರ್ವಾದದೊಂದಿಗೆ ಕಾರ್ಯಾಚರಿಸುತ್ತಿರುವ ಜಾಮಿಹಃ ನೂರಿಯಾಃದ ಅಧೀನ ಸಂಸ್ಥೆಗಳು ಇಂದು ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ಸ್ತುತ್ಯರ್ಹ ಸೇವೆಯೊಂದಿಗೆ ವಿಶ್ವ ಪ್ರಸಿದ್ಧಿ ಪಡೆದಿದೆ ಎಂದರು.
ಸಮಾರಂಭದಲ್ಲಿ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರು ದಿಕ್ಸೂಚಿ ಭಾಷಣ ಮಾಡಿದರು. ಕಕ್ಕಿಂಜೆ ಮುದರ್ರಿಸ್ ಐ.ಕೆ. ಮೂಸಾ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೂಡಿಗೆರೆ ಖಾಝಿ ಎಂ.ಎ. ಖಾಸಿಂ ಉಸ್ತಾದ್, ಅಡ್ವಕೇಟ್ ಹನೀಫ್ ಹಾದವಿ ದೇಲಂಪಾಡಿ, ಬಿ.ಕೆ. ಅಬ್ದುಲ್ ಖಾದರ್, ಖಾಸಿಮಿ ಬಂಬ್ರಾಣ ಹಸನಬ್ಬ ಚಾರ್ಮಾಡಿ, ಟಿ.ಯಂ. ಶಹೀದ್ ಸುಳ್ಯ, ಕಾಲೇಜಿನ ರುವಾರಿಗಳಾದ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಅಲೀ ತಂಙಳ್ ಕರಾವಳಿ, ಬದ್ರುದ್ದೀನ್ ತಂಙಳ್ ಮಂಜೇಶ್ವರ, ಮೊದಲಾದವರು ಮಾತನಾಡಿದರು. ಸಮಾರಂಭದಲ್ಲಿ ಆಲಿಕುಟ್ಟಿ ಉಸ್ತಾದ್, ಖಾಸಿಂ ಉಸ್ತಾದ್, ಬಿ.ಎ. ನಝೀರ್, ಬಿ.ಎಚ್. ಮುಹಮ್ಮದ್ ಹಾಜಿ ಮೊದಲಾದ ಗಣ್ಯರನ್ನು ದಹ್‌ವಾ ಕಾಲೇಜ್ ಕಮಿಟಿ ಮತ್ತು ಬೆಳ್ತಂಗಡಿ ರೇಂಜ್ ಜಂಯ್ಯಿತುಲ್ ಮುಹಲ್ಲಿಮೀನ್ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ :-ಅಸ್ಸಯ್ಯಿದ್ ಅಲೀ ತಂಙಳ್ ಕುಂಭೋಳ್, ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಅಸ್ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಅಸ್ಸಯ್ಯಿದ್ ಹುಸೈನ್ ಬಾಅಲವೀ ತಂಙಳ್, ಕುಕ್ಕಾಜೆ, ಅಸ್ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಆತೂರು, ಅಸ್ಸಯ್ಯಿದ್ ತ್ವಾಹಾ ಜಿಫ್ರಿ ತಂಙಳ್ ಅಡ್ಯಾರು, ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ, ಪಿತಾಂಬರ ಹೆರಾಜೆ, ಸಂಶುದ್ದೀನ್ ದಾರಿಮಿ ಬೆಳ್ತಂಗಡಿ, ಶರೀಫ್ ಫೈಝಿ ಕಡಬ, ಅಶ್ರಫ್ ಫೈಝಿ ಪುಂಜಾಲಕಟ್ಟೆ, ಅಬ್ದುಲ್ ಮಜೀದ್ ದರಿಮಿ ಪಾಂಡವರಕಲ್ಲು, ಉಮರ್ ಮುಸ್ಲಿಯಾರ್ ಪಾಂಡವರಕಲ್ಲು, ಹುಸೈನ್ ದಾರಿಮಿ ರೆಂಜಲಾಡಿ, ಶರೀಫ್ ಪೊನ್ನಾನಿ, ಮೊದಿನಬ್ಬ ಹಾಜಿ ಮಂಗಳೂರು, ಅಬ್ಬಾಸ್ ಪಜೆಮಾರು ಕನ್ನಡಿಕಟ್ಟೆ, ಕೋಯ ಮುಸ್ಲಿಯಾರ್ ಮದ್ದಡ್ಕ, ಅಬ್ದುಲ್ಲಾ ದಾರಿಮಿ ಪೆರಾಲ್ದಕಟ್ಟೆ, ಜಿ.ವೈ. ಅಬ್ದುಲ್ ರಝಾಕ್ ಮುಸ್ಲಿಯಾರ್ ಗೇರುಕಟ್ಟೆ, ಹಸನ್ ಅರ್ಶದಿ, ಹಮೀದ್ ಕಣ್ಣೂರು, ಅಬ್ದುಲ್ಲಾ ರಹ್‌ಮಾನಿ, ಅಬ್ದುರ್ರಝಾಕ್ ಪುಂಜಾಲಕಟ್ಟೆ, ಬಿ.ಎಚ್. ಮುಹಮ್ಮದ್ ಹಾಜಿ ಬೆಳ್ತಂಗಡಿ, ಬಿ.ಎಚ್. ರಝಾಕ್ ಬೆಳ್ತಂಗಡಿ, ಶೇಕುಂಞ ಬೆಳ್ತಂಗಡಿ, ಇ.ಕೆ. ಬಶೀರ್ ವಗ್ಗ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಹನೀಫ್ ಜಾರಿಗೆಬೈಲು, ಹನೀಫ್ ದೂಮಳಿಕೆ, ಸಿರಾಜ್ ಚಿಲಿಂಬಿ ಮದ್ದಡ್ಕ, ಇಲ್ಯಾಸ್ ಅಹ್ಮದ್ ಕಕ್ಕಿಂಜೆ, ಸ್ವಾಲಿ ಹಾಜಿ ಕಕ್ಕಿಂಜೆ, ಕೆ.ಎ. ರಹ್‌ಮಾನ್ ಕಕ್ಕಿಂಜೆ, ಹೆಚ್.ಎ. ಶರೀಫ್ ಕಕ್ಕಿಂಜೆ, ಶಕೀಲ್ ಅರೆಕ್ಕಲ್ ಕಕ್ಕಿಂಜೆ, ಇಲ್ಯಾಸ್ ಅಝ್ಹರಿ ಕಿಲ್ಲೂರು, ನಝೀರ್ ಅಝ್ಹರಿ ಬೊಳ್ಮಿನಾರ್, ಸದಕತುಲ್ಲ ದಾರಿಮಿ ಕಕ್ಕಿಂಜೆ, ಹಸೈನಾರ್ ಮುಸ್ಲಿಯಾರ್ ಪೆರಾಲ್ದರಕಟ್ಟೆ, ಅಬ್ದುಲ್ಲಾ ದಾರಿಮಿ ಚಾರ್ಮಾಡಿ, ಅಬೂಬಕ್ಕರ್ ಮುಸ್ಲಿಯಾರ್ ಸೋಮಂತಡ್ಕ ಉಪಸ್ಥಿತರಿದ್ದರು. ಬಶೀರ್ ದಾರಿಮಿ ಕನ್ನಡಿಕಟ್ಟೆ ಸ್ವಾಗತಿಸಿದರು. ರಿಯಾಝ್ ಫೈಝಿ ಕಕ್ಕಿಂಜೆ ವಂದಿಸಿದರು, ಕೆ.ಎಂ. ಕೂಡುಂಗಾಯಿ ಹಾಗೂ ಶರೀಫ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.