ಉಜಿರೆ : ಉಜಿರೆ ಬೆಳಾಲು ರಸ್ತೆಯ ಓಡಲದವರೆಗೆ ರಸ್ತೆ ತೀರಾ ಹದಕೆಟ್ಟಿದ್ದು ರಸ್ತೆಯಲ್ಲಿ ಹೊಂಡಗಳಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಓಡಲ ರಿಕ್ಷಾ ಚಾಲಕರು ಮೇ 19 ಜಿಲ್ಲಾ ಬಂದ್ ದಿನದಂದು ಹೊಂಡಕ್ಕೆ ಮಣ್ಣು ಹಾಕುವ ಕೆಲಸವನ್ನು ಶ್ರಮದಾನದ ಮೂಲಕ ಮಾಡಿದರು. ಶ್ರಮದಾನದಲ್ಲಿ ಅಶೋಕ, ವಸಂತ, ಮಣಿಕಂಠ, ವಿಶ್ವನಾಥ, ಸುಂದರ, ಲೋಹಿತ್ ಪೂಜಾರಿ, ದೀಕ್ಷಿತ್, ಗುರುರಾಜ್ ಮೊದಲಾದವರು ಭಾಗವಹಿಸಿದ್ದರು.