ಪಿ.ಡಬ್ಲ್ಯು.ಡಿ ಸ.ಕಾ. ಇಂಜಿನಿಯರ್ ಸುಭಾಶ್ಚಂದ್ರ ಸ್ವಯಂ ನಿವೃತ್ತಿ

Subhaschandra 1 copyಬೆಳ್ತಂಗಡಿ : ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಳೆದ ಆರು ವರ್ಷಗಳಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಭಾಶ್ಚಂದ್ರ ಅವರು ಎ.30ರಂದು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿಗೊಂಡಿದ್ದಾರೆ. 1981ರಿಂದ 1987ರವರೆಗೆ ಸುಮಾರು ಏಳು ವರ್ಷಗಳ ಕಾಲ ಉಡುಪಿಯಲ್ಲಿ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಾಟರ್ ಸಪ್ಲೈ ವಿಭಾಗದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಇವರು1987ರಿಂದ 1997 ಸುಮಾರು ಹತ್ತು ವರ್ಷಗಳ ಕಾಲ ಕಾರ್ಕಳ ತಾಲೂಕು ಜಿ.ಪಂ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಬೆಳ್ತಂಗಡಿ ಜಿ.ಪಂ ಇಂಜಿನಿಯರಿಂಗ್ ಉಪವಿಭಾಗಕ್ಕೆ ವರ್ಗಾವಣೆಗೊಂಡು 1997 ರಿಂದ 1999ರವರೆಗೆ ಸೇವೆ ಸಲ್ಲಿಸಿದ್ದರು. 1999 ರಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಸುಭಾಶ್ಚಂದ್ರ ಅವರು ಎಪ್ರಿಲ್ ೩೦ಕ್ಕೆ ಸ್ವಯಂ ನಿವೃತ್ತಿ ಹೊಂದಿದರು. ಇವರ ಸೇವಾವಧಿಯಲ್ಲಿ ತಾಲೂಕಿನಲ್ಲಿ ಅನೇಕ ಹೊಸ ರಸ್ತೆ, ಸೇತುವೆಗಳ ಕಾಮಗಾರಿಗಳು ನಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.