HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ನಿರ್ಗತಿಕ ಕುಟುಂಬಗಳಿಗೆ ಮಾಸಾಶನ ವಿತರಣೆ ಧರ್ಮಸ್ಥಳದ ರೀತಿಯ ಮಾದರಿ ಸೇವೆಯಿಂದ ದೇಶದಲ್ಲೇ ಸಶಕ್ತತೆ ಸಾಧಿಸಬಹುದು: ಐ.ಡಿ.ಬಿ.ಐ ಬ್ಯಾಂಕ್ ಅಧ್ಯಕ್ಷ ಕಿಶೋರ್ ಖಾರಟ್

idbi bankಧರ್ಮಸ್ಥಳ: ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಮಾಡಿದ ಸಾಧನೆ, ಪ್ರಗತಿ, ಆರ್ಥಿಕ ಸ್ವಾವಲಂಬನೆ ಮತ್ತು ಮಹಿಳಾ ಸಬಲೀಕರಣ ದೇಶಕ್ಕೆ ಮಾದರಿಯಾಗಿದೆ ಹಾಗೂ ಅನುಕರಣೀಯವಾಗಿದೆ. ಇದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕರ್ನಾಟಕ ರಾಜ್ಯದಲ್ಲಿ ಮಾತ್ರವಾಗಿರುವ ಈ ರೀತಿಯ ಸಶಕ್ತತೆ ಇಡೀ ದೇಶಕ್ಕೆ ಹರಡಿದರೆ ದೇಶವೇ ಸಶಕ್ತವಾಗುವುದರಲ್ಲಿ ಸಂದೇಹವಿಲ್ಲ ಎಂದು ಐ.ಡಿ.ಬಿ.ಐ. ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶೋರ್ ಖಾರಟ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ೯೫೦ ಕೋಟಿ ರೂ. ಗಳಿಗೂ ಅಧಿಕ ಆರ್ಥಿಕ ನೆರವು ನೀಡಿರುವ ಐಡಿಬಿಐ ಬ್ಯಾಂಕಿನ ವತಿಯಿಂದ ಯೋಜನೆಯ ಚಟುವಟಿಕೆಗಳ ಬಗ್ಗೆ ಪರಿಶೀಲನೆಗೆ ಆಗಮಿಸಿದ್ದ ಅವರು ಮೇ. ೧೬ ರಂದು ಇಲ್ಲಿನ ಜ್ಞಾನ ವಿಕಾಸ ಸಭಾಂಗಣದಲ್ಲಿ ನಡೆದ ೫೮೧ ನಿರ್ಗತಿಕ ಕುಟುಂಬಗಳಿಗೆ ೩೭ ಲಕ್ಷ ರೂ. ಮಾಸಾಶನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ವಿವಿಧ ಬ್ಯಾಂಕ್‌ಗಳು ಸ್ವ-ಸಹಾಯ ಸಂಘಗಳಿಗೆ ಐದು ಸಾವಿರ ಕೋಟಿ ರೂ. ಸಾಲ ನೀಡಿವೆ. ದೀನ-ದಲಿತರು, ದುರ್ಬಲ ವರ್ಗದವರು ವಿಶ್ವಾಸಾರ್ಹರು ಹಾಗೂ ಅವರಿಗೆ ನೀಡಿದ ಸಾಲ ಶೇ. ನೂರರಷ್ಟು ವಸೂಲಾತಿ ಆಗುತ್ತದೆ. ಶ್ರೀ ಕ್ಷೇತ್ರದಿಂದ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಲಾಗುತ್ತದೆ. ಇದು ಇತರ ಎನ್‌ಜಿಒ ಗಳಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ  ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪರಾವಲಂಬನೆ ಸಲ್ಲದು. ಸರ್ಕಾರ ಹಾಗೂ ವಿವಿಧ ಸಂಘಟನೆಗಳ ಸೌಲಭ್ಯಗಳ ಸದುಪಯೋಗ ಪಡೆದು ಆರ್ಥಿಕ ಸ್ವಾವಲಂಬನೆಯೊಂದಿಗೆ ಫಲಾನುಭವಿಗಳು ಸ್ವತಂತ್ರ ಜೀವನ ನಡೆಸಬೇಕು. ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಹಿಳಾ ಸಬಲೀಕರಣವಾಗಿ ಈಗ ಮಹಿಳೆಯರು ಪ್ರಗತಿಪರ ಚಿಂತನೆಯೊಂದಿಗೆ ಗೃಹಾಡಳಿತ ನಡೆಸಿ ವ್ಯವಹಾರ ತಜ್ಞರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಪುರುಷಪ್ರಧಾನವಾದ ಸಮಾಜದ ವ್ಯವಸ್ಥೆಯಿಂದ ಇಂದು ಮಹಿಳೆ ಸದೃಢವಾಗಿದ್ದು ಪುರುಷ ಮತ್ತು ಮಹಿಳೆ ಜೋಡಿ ಎತ್ತುಗಳಂತೆ ಪರಸ್ಪರ ಆರ್ಥಿಕ ಹೊಂದಾಣಿಕೆಯಿಂದ ಜೀವನ ನಡೆಸುವಂತಾಗಿದೆ ಎಂದರು. ಐ.ಡಿ.ಬಿ.ಐ. ಮುಖ್ಯ ಪ್ರಬಂಧಕರಾದ ನಾರಾಯಣಮೂರ್ತಿ, ಶ್ರೀನಿವಾಸನ್, ಸುರೇಶ್ ಮತ್ತು ರಾಯಿಸ್ ಎನ್‌ಜಿಒ ಸಂಸ್ಥೆಯ ಹಿರಿಯ ಅಧಿಕಾರಿ ಡಿಂಪಲ್ ಉಪಸ್ಥಿತರಿದ್ದರು. ಸ್ವಾಗತಿಸಿ ಪ್ರಸ್ತಾವನೆಗೈದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಮಾತನಾಡಿ, ಐಡಿಬಿಐ ಬ್ಯಾಂಕ್ ಗ್ರಾಮಾಭಿವೃದ್ಧಿ ಯೋಜನೆಯ ನಿಕಟವರ್ತಿಯಾಗಿದ್ದು ಯೋಜನೆಯ ವತಿಯಿಂದ ಪ್ರಾಯೋಜಿಸಲಾಗಿರುವ ೭೦,೦೦೦ ಕ್ಕೂ ಮಿಕ್ಕಿದ ಸ್ವಸಹಾಯ ಸಂಘಗಳಿಗೆ ರೂ. ೯೫೦ ಕೋಟಿ ಗೂ ಮಿಕ್ಕಿದ ಆರ್ಥಿಕ ನೆರವನ್ನು ಒದಗಿಸಿ. ಅನೇಕ ಫಲಾನುಭವಿಗಳಿಗೆ ಗ್ರಾ. ಯೋಜನೆಯ ಮೂಲಕ ಈಗಾಗಲೇ ೫೦೦ ರಿಂದ ೨,೦೦೦ ರೂ ವರೆಗೆ ವ್ಯತ್ಯಸ್ಥ ರೀತಿಯಲ್ಲಿ ಮಾಸಾಶನವನ್ನು ಮನೆಬಾಗಿಲಿಗೇ ಒದಗಿಸಲಾಗುತ್ತಿದೆ ಎಂದರು.ಫಲಾನುಭವಿ ಚಂಪಾ ಅನಿಸಿಕೆ ವ್ಯಕ್ತಪಡಿಸಿದರು. ಭವ್ಯಾ ಪ್ರಾರ್ಥನೆ ಹಾಡಿದರು. ಅನುಷಾ, ಬಾಗಿ ನಾರಾವಿ, ಅವ್ವಮ್ಮ, ಗುರುವ, ಜಗಧೀಶ್ ಅವರಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಮಾಸಾಶನ ವಿತರಿಸಲಾಯಿತು. ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ರೂಪಾ ಜಿ ಜೈನ್ ಧನ್ಯವಾದವಿತ್ತರು. ಮಮತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.