ಬೆಳ್ತಂಗಡಿ : ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ ೧೦ರಂದು ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು ೬೪ ಪ್ರೌಢ ಶಾಲೆಗಳಿಂದ ಪರೀಕ್ಷೆಗೆ ಕುಳಿತ ೪೨೩೬ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೩೭೨೭ ಮಂದಿ ಉತ್ತೀರ್ಣರಾಗಿ ತಾಲೂಕಿಗೆ ಶೇ ೮೭.೯೮ ಫಲಿತಾಂಶ ಲಭಿಸಿದೆ. ಕಳೆದ ವರ್ಷ ತಾಲೂಕಿಗೆ ಶೇ ೮೮.೬೪ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಫಲಿತಾಂಶದಲ್ಲಿ ಶೇ ೦.೬೬ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬೆಳ್ತಂಗಡಿ ತಾಲೂಕಿನ ೩೯ ಸರಕಾರಿ ಪ್ರೌಢ ಶಾಲೆ, ೯ ಅನುದಾನಿತ ಶಾಲೆ, ೧೬ ಅನುದಾನಿತ ರಹಿತ ಪ್ರೌಢ ಶಾಲೆ ಸೇರಿದಂತೆ ಒಟ್ಟು ೬೪ ಪ್ರೌಢ ಶಾಲೆಗಳಿಂದ ೨೨೦೪ ವಿದ್ಯಾರ್ಥಿಗಳು ಮತ್ತು ೨೦೩೨ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೪೨೩೬ ಮಂದಿ ಹಾಜರಾಗಿದ್ದರು. ಇವರಲ್ಲಿ ೧೮೫೯ ವಿದ್ಯಾರ್ಥಿಗಳು ಮತ್ತು ೧೮೬೮ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೩೭೨೭ ಮಂದಿ ಉತೀರ್ಣರಾಗಿ ಶೇ ೮೮ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳು ಶೇ ೮೪.೩೪ ಹಾಗೂ ವಿದ್ಯಾರ್ಥಿನಿಯರು ಶೇ ೯೧.೯೨ ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
೨೭೮ ವಿದ್ಯಾರ್ಥಿಗಳಿಗೆ ಎ+ ಶ್ರೇಣಿತಾಲೂಕಿ ೬೪ ಪ್ರೌಢ ಶಾಲೆಗಳಿಂದ ಉತ್ತೀರ್ಣರಾದ ೩೭೨೭ ವಿದ್ಯಾರ್ಥಿ-ವಿದ್ಯಾರ್ಥಿನಿ ಯರಲ್ಲಿ ೨೭೮ ಮಂದಿ ವಿದ್ಯಾರ್ಥಿಗಳು ಎ+ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ೭೨೮ ಮಂದಿ ಎ ಶ್ರೇಣಿ, ೯೧೫ ಮಂದಿ ಬಿ+ ಶ್ರೇಣಿ, ೯೧೦ ಮಂದಿ ಬಿ ಶ್ರೇಣಿ, ೬೮೨ ಮಂದಿ ಸಿ+ ಶ್ರೇಣಿ, ೨೧೪ ಮಂದಿ ವಿದ್ಯಾರ್ಥಿಗಳು ಸಿ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನದ ೧೩ ಮಂದಿ, ಗುರುವಾಯನಕೆರೆ ಪ್ರೌಢ ಶಾಲೆಯ ೧೦ ಮಂದಿ, ವೇಣೂರು ಪ.ಪೂ. ಕಾಲೇಜಿನ ೧೩ ಮಂದಿ, ಸ.ಪ.ಪೂ. ಕಾಲೇಜು ಪುಂಜಾಲಕಟ್ಟೆಯ ೧೧ ಮಂದಿ, ಹಾಗೂ ಖಾಸಗಿ ಶಾಲೆಗಳಲ್ಲಿ ಸೈಂಟ್ಮೇರಿಸ್ ಲಾಲದ ೨೪ ಮಂದಿ, ಅನುಗ್ರಹ ಉಜಿರೆಯ ೨೦ ಮಂದಿ, ಸೇ.ಹಾ. ಆಂಗ್ಲ ಮಾಧ್ಯಮ ಮಡಂತ್ಯಾರಿನ ೧೯ ಮಂದಿ, ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಉಜಿರೆಯ ೧೮ ಮಂದಿ ವಾಣಿ ಆಂಗ್ಲ ಮಾಧ್ಯಮ ಬೆಳ್ತಂಗಡಿಯ ೧೭ ಮಂದಿ, ಎಸ್.ಡಿ.ಎಂ. ಸೆಕೆಂಡರಿ ಶಾಲೆ ಉಜಿರೆಯ ೧೫ ಮಂದಿ ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅತಿ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳಾಗಿವೆ.
೧೪ ಪ್ರೌಢ ಶಾಲೆಗಳಿಗೆ ಶೇ ೧೦೦ ಫಲಿತಾಂಶ
ತಾಲೂಕಿನ ೬ ಸರಕಾರಿ ಮತ್ತು ೮ ಖಾಸಗಿ ಸೇರಿದಂತೆ ಒಟ್ಟು ೧೪ ಪ್ರೌಢ ಶಾಲೆಗಳು ಶೇ ೧೦೦ ಫಲಿತಾಂಶವನ್ನು ಪಡೆದುಕೊಂಡ ದಾಖಲೆಯನ್ನು ನಿರ್ಮಿಸಿದೆ.
ಸರಕಾರಿ ಶಾಲೆಗಳಲ್ಲಿ ಸ.ಪ್ರೌ. ಶಾಲೆ ಗುರುವಾಯನಕೆರೆ, ಸ.ಪ್ರೌ. ಶಾಲೆ ನೇಲ್ಯಡ್ಕ, ಸ.ಪ್ರೌ. ಶಾಲೆ ಪೆರ್ಲಬೈಪಾಡಿ, ಮೊರಾರ್ಜಿ ದೇಸಾಯಿ ಮಚ್ಚಿನ, ಸ.ಪ್ರೌ.ಶಾಲೆ ಸವಣಾಲು, ಸ.ಪ್ರೌ. ಶಾಲೆ ಬುಳೇರಿ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ. ಖಾಸಗಿ ಶಾಲೆಗಳಲ್ಲಿ ಸೈಂಟ್ ಮೇರಿಸ್ ಪ್ರೌ.ಶಾಲೆ ಲಾಯಿಲ, ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ ಬೆಳ್ತಂಗಡಿ, ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ, ಸೇ.ಹಾ. ಆಂಗ್ಲ ಮಾಧ್ಯಮ ಮಡಂತ್ಯಾರು, ಸರಸ್ವತಿ ಆಂಗ್ಲ ಮಾಧ್ಯಮ ಮುಂಡಾಜೆ, ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಕಾಯರ್ತಡ್ಕ, ಸೈಂಟ್ ಪೀಟರ್ ಅಳದಂಗಡಿ, ಸೈಂಟ್ ಸಾವಿಯೋ ಬೆಂದ್ರಾಳ ಶಾಲೆಗಳು ಶೇ ೧೦೦ ಫಲಿತಾಂಶ ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ.
ಎಸ್.ಡಿ.ಎಂ. ಉಜಿರೆ, ಅನುಗ್ರಹ ಉಜಿರೆ, ಕೊಕ್ಕಡ ಪ್ರೌಢ ಶಾಲೆ, ಎಸ್.ಡಿ.ಎಂ. ಧರ್ಮಸ್ಥಳ, ಮುಂಡಾಜೆ ಪ್ರೌಢ ಶಾಲೆ, ಹೋಲಿ ರೆಡೀಮರ್ ಬೆಳ್ತಂಗಡಿ, ಪ್ರೌಢ ಶಾಲೆ ಹಳೆಪೇಟೆ ಉಜಿರೆ, ಪ.ಪೂ.ಕಾಲೇಜು ವೇಣೂರು, ಸಂತ ತೆರೆಸಾ ಆಂ.ಮಾ ಬೆಳ್ತಂಗಡಿ, ಮರಿಯಾಂಬಿಕಾ ಬೆದ್ರಬೆಟ್ಟು, ಪ.ಪೂ. ಕಾಲೇಜು ಕೊಯ್ಯೂರು, ಸಂತ ತೆರೆಸಾ ಬೆಳ್ತಂಗಡಿ, ಆತ್ಮಾನಂದ ಸರಸ್ವತಿ ಶಾಲೆ ದೇವರಗುಡ್ಡೆ, ಎಸ್.ಡಿ.ಎಂ ಸೆಕೆಂಡರಿ ಉಜಿರೆ, ಎಸ್.ಡಿ.ಎಂ ಪೆರಿಂಜೆ, ಪ.ಪೂ.ಕಾಲೇಜು ಕೊಕ್ರಾಡಿ, ಪ್ರೌಢ ಶಾಲೆ ಕರಾಯ, ಪ್ರೌಢ ಶಾಲೆ ನಡ, ಮೊರಾರ್ಜಿ ದೇಸಾಯಿ ಮುಂಡಾಜೆ, ಪ್ರೌಢ ಶಾಲೆ ಕಲ್ಮಂಜ, ಪ್ರೌಢ ಶಾಲೆ ಶಾಲೆತ್ತಡ್ಕ, ಪ.ಪೂ.ಕಾಲೇಜು ಪದ್ಮುಂಜ, ಸ.ಪ್ರೌ.ಶಾಲೆ ನಾರಾವಿ, ನಾರಾವಿ ಪ್ರೌಢ ಶಾಲೆ, ಸೈಂಟ್ ಪಾವಲ್ಸ್ ನಾರಾವಿ ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ದಾಖಲೆಗೆ ಒಳಗಾಗಿವೆ.
ಸರಕಾರಿ ಶಾಲೆಗಳಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಸತತ ಐದನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದಿದ್ದು, ಜಿಲ್ಲೆಯ ಏಕೈಕ ಸರಕಾರಿ ಪ್ರೌಢ ಶಾಲೆ ಎಂಬ ದಾಖಲೆಯನ್ನು ಪಡೆದುಕೊಂಡಿದೆ. ತಾಲೂಕಿನ ಅನೇಕ ಸರಕಾರಿ ಹಾಗೂ ಖಾಸಗಿ ಶಾಲೆಗಳು ಈ ಬಾರಿಯೂ ಶೇ ೧೦೦ ಫಲಿತಾಂಶ ಪಡೆದುಕೊಂಡಿದೆ.
ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಲಾಲ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿ ಸುಶುತ್ ಯು.ಕೆ. ೬೨೪ ಅಂಕ ಗಳಿಸಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಅವಿನಾಶ್ ೬೨೨ ಅಂಕಗಳಿಸಿ ತಾಲೂಕಿಗೆ ದ್ವೀತಿಯ, ಸೈಂಟ್ ಮೇರಿಸ್ ಪ್ರೌಢ ಶಾಲೆಯ ಮಾನಸ ಭಿಡೆ ೬೧೯ ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಾಣಿ ಆಂಗ್ಲ ಮಾಧ್ಯಮ ಬೆಳ್ತಂಗಡಿಯ ಸುಕನ್ಯ ವಿ. ಕಾಮತ್ ೬೧೭ ಅಂಕಗಳಿಸಿ ನಾಲ್ಕನೇ ಸ್ಥಾನ, ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲೆಯ ಗುರುಭಟ್, ಮುಂಡಾಜೆ ಪ್ರೌಢ ಶಾಲೆಯ ಮಧುಶ್ರೀ, ವೇಣೂರು ಸ.ಪ.ಪೂ. ಕಾಲೇಜಿನ ನಿಶಾ, ಆತ್ಮಾನಂದ ಸರಸ್ವತಿ ವಿದ್ಯಾಲಯದ ದೇವರಗುಡ್ಡೆಯ ಭಾವನ ಪಿ. ನಾಯ್ಕ್ ತಲಾ ೬೧೬ ಅಂಕಗಳಿಸಿ ಐದನೇ ಸ್ಥಾನ, ಸಂತ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಜೈಸನ್ ಡಿ’ಸೋಜ ೬೧೫ ಅಂಕ ಗಳಿಸಿ ಆರನೇ ಸ್ಥಾನ, ಸ.ಪ.ಪೂ. ಕಾಲೇಜು ಪುಂಜಾಲಕಟ್ಟೆಯ ಧೀರಜ್ ಶೆಟ್ಟಿ ೬೧೪ ಅಂಕಗಳಿಸಿ ಏಳನೇ ಸ್ಥಾನ, ಸೇ.ಹಾ. ಆಂಗ್ಲ ಮಾಧ್ಯಮ ಶಾಲೆಯ ಆದರ್ಶ ಜೋಸೆಫ್ ೬೧೩ ಅಂಕಗಳಿಸಿ ಎಂಟನೇ ಸ್ಥಾನ, ಸೈಂಟ್ ಮೇರಿಸ್ ಲಾಲದ ಮಹೀರ್ ರಾವ್ ೬೧೨ ಅಂಕಗಳಿಸಿ ಒಂಭತ್ತನೇ ಸ್ಥಾನ ಹಾಗೂ ಸ.ಪ.ಕಾ. ಪುಂಜಾಲಕಟ್ಟೆಯ ರೈಹಾನ, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಸುರೇಶ್ ಮತ್ತು ಅಭಿರಾಮ್, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಧರ್ಮಸ್ಥಳದ ಅನುಪಮಾರಾಜ್ ೬೧೧ ಅಂಕಗಳಿಸಿ ಹತ್ತನೇ ಸ್ಥಾನಗಳಿಸಿದ್ದಾರೆ.