ಬಜಿರೆ : ಮೇ 17 ರಂದು ಸುಂಟರಗಾಳಿ ಮಳೆಗೆ ಬಜಿರೆ ಗ್ರಾಮದ ಸಿದ್ಧಿ ಶ್ರೀ ಮನೆಯ ಸಂಜೀವ ಸುವರ್ಣರವರ ೧೦೦ ಅಡಿಕೆ ಮರ, ರಬ್ಬರ್, ಬಾಳೆ, ತೆಂಗಿನಮರಗಳು ನಾಶವಾಗಿದೆ, ಅಲ್ಲದೇ ಕುಂಟಲ್ಮಾರ್ ಮನೆಯ ಚಂದ್ರಶೇಖರ್ ಪೂಜಾರಿಯವರ ಅಡಿಕೆ ಒಣಗಿಸುವ ಟರ್ಪಲ್ ಗಾಳಿ ರಭಸಕ್ಕೆ ಹಾರಿ ಹೋಗಿದ್ದು ಅಡಿಕೆ, ತೆಂಗು, ರಬ್ಬರ್, ಮುಂತಾದ ಕೃಷಿಗೆ ಹಾನಿಯಾಗಿದೆ.