ದ್ರಾವಿಡ್ ಅದ್ಭುತ ಸಾಮರ್ಥ್ಯವಂತ: ಪಾಂಟಿಂಗ್

Advt_NewsUnder_1
Advt_NewsUnder_1
Advt_NewsUnder_1

ಭಾರತ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ನಿರ್ವಹಿಸುವ ಅಧ್ಬುತ ಸಾಮರ್ಥ್ಯ ರಾಹುಲ್ ದ್ರಾವಿಡ್‌ಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ, ಕ್ರಿಕೆಟ್ ವಿಶ್ಲೇಷಕರ ಸಲಹೆ ಕೂಡ ಆಗಿದೆ. ಈ ಬಗ್ಗೆ ಬಿಸಿಸಿಐ ನಿರ್ಧಾರ ಕೈಗೊಳ್ಳಲಿ ಎಂದಿದ್ದಾರೆ. ಟೆಸ್ಟ್ ಪಂದ್ಯ, ಏಕದಿನ ಹಾಗೂ ಟಿ ೨೦ ಮೂರು ಮಾದರಿಗಳಲ್ಲೂ ರಾಹುಲ್ ದ್ರಾವಿಡ್ ಪರಿಣಿತಿ ಪಡೆದಿರುವುದರಿಂದ ತಂಡದ ನೆರವಿಗೆ ಸಹಕಾರಿಯಾಗಲಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಕೂಡ ಯಶಸ್ಸಿನೆಡೆಗೆ ಕೊಂಡೊಯ್ಯಲು ದ್ರಾವಿಡ್ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.