ಭಾರತ ಹಾಕಿ ತಂಡಕ್ಕೆ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ಲಂಡನ್‌ನಲ್ಲಿ ಜೂನ್ 10ರಿಂದ 17ರ ತನಕ ನಡೆಯಲಿರುವ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಕಿ ತಂಡವನ್ನು ಗೋಲ್ಕೀಪರ್ ಪಿಆರ್ ಶ್ರೀಜೇಶ್ ಮುನ್ನಡೆಸಲಿದ್ದಾರೆ. ನಾಯಕ ಸರ್ದಾರ್ ಸಿಂಗ್‌ಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಶ್ರೀಜೇಶ್‌ಗೆ ಈ ಅವಕಾಶ ನೀಡಲಾಗಿದೆ. ಕನ್ನಡಿಗ ಎಸ್.ವಿ. ಸುನಿಲ್ ಉಪನಾಯಕರಾಗಿ ಶ್ರೀಜೇಶ್‌ಗೆ ಸಾಥ್ ನೀಡಲಿದ್ದಾರೆ. ಮಂಗಳವಾರ ಆಯ್ಕೆ ಸಮಿತಿ ೧೮ ಮಂದಿ ಸದಸ್ಯರ ತಂಡ ಪ್ರಕಟಿಸಿದ್ದು, ಸರ್ದಾರ್ ಸಿಂಗ್ ಹಾಗೂ ಡ್ರ್ಯಾಗ್ ಫ್ಲಿಕರ್ ರುಪಿಂದರ್ ಪಾಲ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಿರುವುದಾಗಿ ತಿಳಿಸಿದೆ. ಉಳಿದಂತೆ ಕನ್ನಡಿಗರಾದ ವಿ.ಆರ್. ರಘುನಾಥ್, ಎಸ್.ಕೆ. ಉತ್ತಪ್ಪ, ನಿಕ್ಕಿನ್ ತಿಮ್ಮಯ್ಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ತಂಡದಲ್ಲಿ ಪಿ.ಆರ್. ಶ್ರೀಜೇಶ್(ನಾಯಕ), ವಿಕಾಸ್ ದಾಹಿಯಾ, ಪ್ರದೀಪ್ ಮೊರ್, ವಿ.ಆರ್. ರಘುನಾಥ್, ಕೊಥಾಜಿತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ದಾನಿಶ್ ಮುಜ್ತಾಬಾ, ಚಿಂಗ್ಲೆನ್‌ಸಾನಾ ಸಿಂಗ್, ಮನಪ್ರೀತ್ ಸಿಂಗ್, ಎಸ್.ಕೆ. ಉತ್ತಪ್ಪ, ದಿವೀಂದರ್ ವಾಲ್ಮಿಕಿ, ಹರ್ಜೀತ್ ಸಿಂಗ್, ತಲ್ವಿಂದರ್ ಸಿಂಗ್, ಮನದೀಪ್ ಸಿಂಗ್, ಎಸ್.ವಿ. ಸುನಿಲ್(ಉಪನಾಯಕ), ಆಕಾಶ್‌ದೀಪ್ ಸಿಂಗ್, ನಿಕ್ಕಿನ್ ತಿಮ್ಮಯ್ಯ ಇರಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.