ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ತಿಥಿ ಪ್ರಥಮ ಅತ್ಯುತ್ತಮ ಚಿತ್ರ ಹಾಗೂ ಮಾರಿಕೊಂಡವರು ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. ತೃತೀಯ ಅತ್ಯುತ್ತಮ ಚಿತ್ರವಾಗಿ ಮೈತ್ರಿ  ಹಾಗೂ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಕೃಷ್ಣ ಲೀಲಾ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ಮಕ್ಕಳ ಚಿತ್ರವಾಗಿ ಮನೆಯೇ ಮೊದಲ ಪಾಠ ಶಾಲೆ ಮತ್ತು ನಿರ್ದೇಶಕರ ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರವಾಗಿ ರಂಗಿತರಂಗ ಪ್ರಶಸ್ತಿ ಬಾಚಿಕೊಂಡಿದ್ದು, ಅತ್ಯುತ್ತಮ ಕರ್ನಾಟಕ ಪ್ರಾದೇಶಕ ಭಾಷಾ ಚಿತ್ರವಾಗಿ ತಳಂಗನೀರು(ಕೊಡವ ಭಾಷೆ)ಗೆ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಟ ವಿಜಯ ರಾಘವೇಂದ್ರ(ಶಿವಯೋಗಿ ಶ್ರೀ ಪುಟ್ಟಯ್ಯಜ್ಜ) ಹಾಗೂ ಅತ್ಯುತ್ತಮ ನಟಿಯಾಗಿ ಮಾಲಾಶ್ರೀ(ಗಂಗಾ) ಪ್ರಶಸ್ತಿ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.