ನೇತ್ರಾವತಿ ಉಳಿವಿಗೆ ಆಗ್ರಹಿಸಿ – ಎತ್ತಿನಹೊಳೆ ಯೋಜನೆ ವಿರೋಧಿಸಿ ಡಿ.ಸಿ ಕಛೇರಿ ಎದುರು ಪ್ರತಿಭಟನೆ

dr horata  ಜಿಲ್ಲೆಯ ಜೀವನದಿ ನೇತ್ರಾವತಿಯ ಉಳಿವಿಗೆ ಆಗ್ರಹಿಸಿ, ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ 16 ರಂದು ಸಾವಿರಾರು ಮಂದಿ ಸೇರಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಸುರತ್ಕಲ್, ಎಂ.ಜಿ ಹೆಗ್ಡೆ, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಸಾದ್ವಿ ಮಾತಾನಂದಮಯಿ, ಗುರುಪುರ, ಕೇಮಾರು ಸ್ವಾಮೀಜಿ, ಮುಸ್ಲಿಂ ಸೆಂಟ್ರಲ್ ಮಹಮ್ಮದ್ ಮಸೂದ್ ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಪುತ್ತೂರಿನಿಂದ ಅರುಣ್ ಕುಮಾರ್ ಪುತ್ತಿಲ, ಅಜಿತ್ ರೈ, ಅಶೋಕ್ ಕುಮಾರ್ ಪುತ್ತಿಲ, ರವಿರಾಜ್ ಕಡಬ ಸೇರಿದಂತೆ ಕೆಲವರು ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಮನವಿ ಸ್ವೀಕರಿಸಿರುತ್ತಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಬಳಿಕ ಜಿಲ್ಲಾಧಿಕಾರಿಗಳು ಇಲ್ಲದೇ ಅಪಾರ ಜಿಲ್ಲಾಧಿಕಾರಿಗಳು ಅಪಾರ ಜಿಲ್ಲಾಧಿಕಾರಿಗಳು ಬರುತ್ತಾರೆ ಎಂದು ಹೇಳಿದಾಗ ಆಕ್ರೋಶಿತ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಬರದೇ ಇದ್ದರೆ ತಾವು ಕಛೇರಿ ಮುತ್ತಿಗೆ ಹಾಕುವುದಾಗಿ ಎಚ್ಚರಿಗೆ ನೀಡಿದರು. ಕೊನೆಗೂ ಜಿಲ್ಲಾಧಿಕಾರಿಗಳು ಸಭಾ ವೇದಿಕೆಗೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.