HomePage_Banner_
HomePage_Banner_

ಎಸ್ಸೆಸ್ಸೆಲ್ಸಿ ಫಲಿತಾಂಶ:

sushruth 1

sushruthಬೆಳ್ತಂಗಡಿ ತಾ| ಲಾಯಿಲ ಸೈಂಟ್‌ಮೇರಿ ಶಾಲಾ ಬಾಲಕ ಶುಶೃತ್ ಯು. ಕೆ ರಾಜ್ಯಕ್ಕೆ ದ್ವಿತೀಯ
ಬೆಳ್ತಂಗಡಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲದ ಸೈಂಟ್ ಮೇರಿಸ್ ಸಂಸ್ಥೆಯ ವಿದ್ಯಾರ್ಥಿ ಶುಶೃತ್ ಭಟ್ ಅವರು 625 ರಲ್ಲಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸುಪರಿಡೆಂಟ್ ಆಗಿರುವ ಕಿಶೋರ್ ಕುಮಾರ್ ಯು. ವಿ ಮತ್ತು ಸತತ 5 ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸುತ್ತಿರುವ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲಾ ಕನ್ನಡ ಶಿಕ್ಷಕಿಯಾಗಿರುವ ಸುರೇಖಾ ದಂಪತಿ ಪುತ್ರರಾಗಿರುವ ಶುಶೃತ್ ಓದಿನಲ್ಲಿ ಮಾತ್ರವಲ್ಲದೆ ಯಕ್ಷಗಾನ, ಭಾಗವತಿಕೆ, ಕೊಳಲು ವಾದನ, ಸಂಗೀತ, ವಯಲಿನ್, ಇತ್ಯಾಧಿ ಕಲಾ ಕ್ಷೇತ್ರಗಳಲ್ಲೂ ಕ್ರಿಯಾಶೀಲವಾಗಿದ್ದಾರೆ.
ಮೆಡಿಕಲ್ ಡೈರೆಕ್ಟರ್ ಆಗುವ ಆಸೆ:
ಸುದ್ದಿ ಅವರನ್ನು ಭೇಟಿ ಮಾಡಿದಾಗ, 620 ಅಂಕ ಬರುವ ನಿರೀಕ್ಷೆ ಇತ್ತು. ದಿನಕ್ಕೆ 7 ಗಂಟೆ ಓದುತ್ತಿದ್ದೆ. ಈಗ ಬದಿರುವ ಅಂಕದಿಂದ ಸಂತೋಷವಾಗಿದೆ. ಇದರಲ್ಲಿ ನನ್ನ ಗುರುಗಳು, ಹೆತ್ತವರು, ಅದರಲ್ಲೂ ವಿಶೇಷವಾಗಿ ತಾಯಿಯ ಪ್ರೋತ್ಸಾಹ ಕೂಡ ಇದೆ. ಎಂದರು. ಮಡಿಕೇರಿಯಲ್ಲಿ 5  ನೇ ತರಗತಿವರಗೆ ಓದಿರುವ ಶುಶೃತ್ 9ನೇ ತರಗತಿಯಿಂದ ಲಾಲ ಸೈಂಟ್ ಮೇರಿಸ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಾದರೂ ಅವರು ಕನ್ನಡದಲ್ಲೂ ಕೂಡ ಶೇಕಡಾ 100  ಅಂದರೆ 125 ಪೂರ್ತಿ ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ಒಂದು ಪಠ್ಯದಲ್ಲಿ 99   ಹೊರತುಪಡಿಸಿ ಎಲ್ಲಾ ಸಬ್‌ಜೆಕ್ಟ್‌ಗಳಲ್ಲೂ ಶೇ. 100 ಅಂಕ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.