ಧರ್ಮಸ್ಥಳಕ್ಕೆ ಐಡಿಬಿಐನ ಅಧ್ಯಕ್ಷರ ಭೇಟಿ .ಮಾಸಾಶನ ವಿತರಣಾ ಕಾರ್ಯಕ್ರಮ

   idbi bankಐಡಿಬಿಐನ ಬ್ಯಾಂಕಿನ ಅಧ್ಯಕ್ಷರಾದ ಕಿಶೋರ್ ಖಾರಟ್‌ರವರು ದಿನಾಂಕ ಮೇ ೧೬ರಂದು ಧರ್ಮಸ್ಥಳ ಭೇಟಿ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಐಡಿಬಿಐ ಬ್ಯಾಂಕ್ ಗ್ರಾಮಾಭಿವೃದ್ಧಿ ಯೋಜನೆಯ ನಿಕಟವರ್ತಿಯಾಗಿದ್ದು, ಯೋಜನೆಯ ವತಿಯಿಂದ ಪ್ರಾಯೋಜಿಸಲಾಗಿರುವ ೭೦೦೦೦ ಕ್ಕೂ ಮಿಕ್ಕಿದ ಸಂಘಗಳಿಗೆ ರೂ. ೯೫೦ಕೋಟಿಗೂ ಮಿಕ್ಕಿದ ಆರ್ಥಿಕ ನೆರವನ್ನು ಒದಗಿಸಿದೆ. ತಮ್ಮ ಬೇಟಿಯ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕಿನ ಅಧ್ಯಕ್ಷರು ಸ್ವ ಸಹಾಯ ಸಂಘಗಳ ಬೇಟಿ ಅಲ್ಲದೆ ಸಿರಿ ಸಂಸ್ಥೆ ಮತ್ತು ಯೋಜನೆಯ ಕೇಂದ್ರ ಕಛೇರಿಗೂ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭ ಯೋಜನೆಯ ಕೇಂದ್ರ ಕಛೇರಿಯ ಜ್ಞಾನವಿಕಾಸ ಸಭಾಂಗಣದಲ್ಲಿ ಸಂಜೆ ಹಮ್ಮಿಕೊಳ್ಳಲಾಗಿತ್ತು ನಿರ್ಗತಿಕರ ಮಾಸಾಶನ ವಿತರಣಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸದ್ದರು. ಇದೇ ಸಂದರ್ಭ ರಾಷ್ಟ್ರದ ಪ್ರಖ್ಯಾತ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.