ಮೇ. 22: ಗುರುವಾಯನಕೆರೆ ಕುಲಾಲ ಮಂದಿರದಲ್ಲಿ “ಕುಂಭ ಕಲೋತ್ಸವ”

kalothsava ಬೆಳ್ತಂಗಡಿ: ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ತಾಲೂಕು ಘಟಕದ ವತಿಯಿಂದ ಸಮಾಜದ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕುಲಾಲ ಮತ್ತು ಕುಂಬಾರರ ಸಮಾಜದ ಏಳಿಗೆಗೆ ಮತ್ತು ಸಮಾಜವನ್ನು ಒಂದುಗೂಡಿಸುವ ಸಲುವಾಗಿ ಅಲ್ಲದೆ ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ “ಕುಂಭ ಕಲೋತ್ಸವ” ಕಾರ್ಯಕ್ರಮವನ್ನು ಮೇ. 22 ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಉಮೇಶ್ ಕುಲಾಲ್, ಪ್ರಮುಖರಾದ ವಿಮಲಾ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಏಳಿಗೆಗೆ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವ ಉದ್ಧೇಶದಿಂದ 15 ಮಂದಿ ಆಯ್ದ ವ್ಯಕ್ತಿಗಳಿಗೆ ಸನ್ಮಾನ, ಇನ್ನೂ ಕೆಲವರಿಗೆ ಅಭಿನಂದನೆ ಹಾಗೂ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಕೂಡ ಆಯೋಜನೆಗೊಳಿಸಲಾಗಿದೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಜಯರಾಜ್ ಪಕ್ಕಿದಕಲ, ಜಗದೀಶ್ ಮಾಪಲಾಡಿ, ಮೋಹನಂದ ಕುಲಾಲ್ ಶಿವಾಜಿನಗರ, ಕವನ್ ಕೊಜಪ್ಪಾಡಿ, ಸತೀಶ್ ಕುಲಾಲ್ ಜಿ. ಎಸ್ ಗಾಂದೊಟ್ಟು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.